ADVERTISEMENT

ಮೂಡಿಗೆರೆಯಲ್ಲಿ ಉತ್ಸವಕ್ಕೆ ಚಾಲನೆ

ದೇವಿರಮ್ಮ ಬನದಲ್ಲಿ ದುರ್ಗಾಮಾತೆ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:27 IST
Last Updated 27 ಸೆಪ್ಟೆಂಬರ್ 2022, 6:27 IST
ಮೂಡಿಗೆರೆಯಲ್ಲಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು
ಮೂಡಿಗೆರೆಯಲ್ಲಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸೋಮವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ನವರಾತ್ರಿ ಉತ್ಸವಕ್ಕೆ ಸೋಮವಾರ ಬೆಳಿಗ್ಗೆಯಿಂದಲೇ ಸಜ್ಜುಗೊಳಿಸಲಾಗಿದ್ದು, ಮನೆಗಳಲ್ಲಿ ತಳಿರು ತೋರಣ
ಗಳೊಂದಿಗೆ ದಸರಾ ಗೊಂಬೆಗಳನ್ನು ಅಲಂಕರಿಸಿ, ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ದೇವಾಲಯಗಳಿಗೆ ತೆರಳಿ ದುರ್ಗಾಪೂಜೆ ನಡೆಸಿದರು.

ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾಸೇವಾ ಸಮಿತಿ ವತಿಯಿಂದ ದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಮೊದಲ ದಿನ ಗಣಪತಿ ಹೋಮ ನಡೆಸಲಾಯಿತು. ಶ್ರೀ ದುರ್ಗಾ ಸಮಿತಿಯ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡರು. ನವರಾತ್ರಿ ಉತ್ಸವದ ಅಂಗವಾಗಿ ಅಂಗಡಿ ಗ್ರಾಮದ ವಸಂತ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿ ದಿನವೂ ರಾತ್ರಿ 8 ಕ್ಕೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದೆ. ತಾಲ್ಲೂಕಿನ ಸಾರಗೋಡು ಗ್ರಾಮದ ದೇವಿರಮ್ಮ ದೇವಾಲಯ, ತಲಗೂರು ಗ್ರಾಮದ ಕಾಡುಮನೆ ಚಾಮುಂಡೇಶ್ವರಿ ದೇವಾಲಯ, ಎಸ್ಟೇಟ್ ಕುಂದೂರು ಚಾಮುಂಡೇಶ್ವರಿ ದೇವಾಲಯಗಳಲ್ಲಿ ಪೂಜೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.