ADVERTISEMENT

ಕೊಪ್ಪ: ಉತ್ತಮೇಶ್ವರ ಸ್ವಾಮಿಯ ವಿಜೃಂಭಣೆ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:07 IST
Last Updated 22 ಜನವರಿ 2026, 6:07 IST
ಕೊಪ್ಪ ತಾಲ್ಲೂಕು ಉತ್ತಮೇಶ್ವರ ಸ್ವಾಮಿ ರಥೋತ್ಸವ ನಡೆಯಿತು
ಕೊಪ್ಪ ತಾಲ್ಲೂಕು ಉತ್ತಮೇಶ್ವರ ಸ್ವಾಮಿ ರಥೋತ್ಸವ ನಡೆಯಿತು   

ಕೊಪ್ಪ: ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರದಲ್ಲಿರುವ ದುರ್ಗಾ ಸಮೇತ ಉತ್ತಮೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಹಣ್ಣು–ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ರಥೋತ್ಸವ ನಡೆಯಿತು. ದವಸ ಧಾನ್ಯಗಳನ್ನು ಎರಚಿ ಹರ್ಷೋದ್ಘಾರದೊಂದಿಗೆ ರಥವನ್ನು ಅನತಿ ದೂರದವರೆಗೆ ಎಳೆದರು.

ಸಾಂಸ್ಕೃತಿಕ ಕಾರ್ಯಕ್ರಮ ಭಾಗವಾಗಿ ಜನಾರ್ದನ ಮಂಡಗಾರು ತಂಡದಿಂದ ಸಂಜೆ ‘ಶಾಂಭವಿ ವಿಲಾಸ’ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿತ್ತು. ಗುರುವಾರ (ಜ.22) ಅವಭೃತ ಸ್ನಾನ, ಪಲ್ಲಕ್ಕಿ ಉತ್ಸವ ನಡೆಯಲಿದೆ. ನೆಮ್ಮಾರು ಪಾರ್ಥಸಾರಥಿ ತಂಡದಿಂದ ನಾಮ ಸಂಕೀರ್ತನೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, 23ಕ್ಕೆ ಶುದ್ಧ ಸಂಪ್ರೋಕ್ಷಣೆ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.