ADVERTISEMENT

ಕಡೂರು- ಲಯನ್ಸ್ ಸಂಸ್ಥೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 13:13 IST
Last Updated 29 ಜೂನ್ 2025, 13:13 IST
ಕಡೂರು ಲಯನ್ಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಡಾ.ನಿತೀಶ್ ಕಣ್ಣು ಪರೀಕ್ಷೆ ನಡೆಸಿದರು. ಲಯನ್ಸ್ ಅಧ್ಯಕ್ಷ ಕೆ.ಎಸ್.ತ್ಯಾಗರಾಜ್, ಬಿಎಸ್.ಸತೀಶ್, ಡಾ.ಮಂಜುನಾಥ್, ಧನಂಜಯ ಭಾಗವಹಿಸಿದ್ದರು
ಕಡೂರು ಲಯನ್ಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಡಾ.ನಿತೀಶ್ ಕಣ್ಣು ಪರೀಕ್ಷೆ ನಡೆಸಿದರು. ಲಯನ್ಸ್ ಅಧ್ಯಕ್ಷ ಕೆ.ಎಸ್.ತ್ಯಾಗರಾಜ್, ಬಿಎಸ್.ಸತೀಶ್, ಡಾ.ಮಂಜುನಾಥ್, ಧನಂಜಯ ಭಾಗವಹಿಸಿದ್ದರು   

ಕಡೂರು: ಲಯನ್ಸ್ ಸಂಸ್ಥೆ ಕಡೂರು ಮತ್ತು ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಸಾರ್ವಜನಿಕರಿಗೆ ಕಣ್ಣು ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ತ್ಯಾಗರಾಜ್, ಪ್ರತಿವರ್ಷವು ನಮ್ಮ ಸಂಸ್ಥೆ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ ಆಯೋಜಿಸಿ, ಕಣ್ಣಿನ ದೋಷ ಇದ್ದವರಿಗೆ ಚಿಕಿತ್ಸೆ ನೀಡಲು ನೆರವಾಗುತ್ತಿದೆ. ತಪಾಸಣೆ ಬಳಿಕ ಶಸ್ತ್ರಚಿಕಿತ್ಸೆಯ ಅಗತ್ಯ ಇರುವವರನ್ನು ಗುರುತಿಸಿ, ಅವರಿಗೆ ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು.

ಲಯನ್ಸ್ ವಲಯ ಅಧ್ಯಕ್ಷ ಬಿ.ಎಸ್.ಸತೀಶ್ ಮಾತನಾಡಿ, ‘ನಮ್ಮ ಸಂಸ್ಥೆಯು ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ನಿತೀಶ್ ಮತ್ತು ಅವರ ತಂಡದ ಸಹಯೋಗದಲ್ಲಿ 75ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆಗೆ 15 ಜನರು ಆಯ್ಕೆಯಾಗಿದ್ದಾರೆ. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದರು.

ADVERTISEMENT

ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಂಜುನಾಥ್, ನಿಯೋಜಿತ ಕಾರ್ಯದರ್ಶಿ ನಿವೃತ್ತ ಎಂಜಿನಿಯರ್ ಸತ್ಯನಾರಾಯಣ, ಖಜಾಂಚಿ ಧನಂಜಯ, ನರೇಂದ್ರನಾಥ್ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.