ADVERTISEMENT

ಬಿ.ಕಣಬೂರು ಗ್ರಾಮ ಪಂಚಾಯಿತಿ: ಜಾನಕಿ ಅಧ್ಯಕ್ಷೆ, ಇಬ್ರಾಹಿಂ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:30 IST
Last Updated 26 ಜುಲೈ 2022, 6:30 IST
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜಾನಕಿ ಮತ್ತು ಉಪಾಧ್ಯಕ್ಷರಾಗಿ ಇಬ್ರಾಹಿಂ ಶಾಫಿ ಅವರನ್ನು ಸ್ಥಳೀಯರು ಅಭಿನಂದಿಸಿದರು.
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜಾನಕಿ ಮತ್ತು ಉಪಾಧ್ಯಕ್ಷರಾಗಿ ಇಬ್ರಾಹಿಂ ಶಾಫಿ ಅವರನ್ನು ಸ್ಥಳೀಯರು ಅಭಿನಂದಿಸಿದರು.   

ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಅಧ್ಯಕ್ಷೆಯಾಗಿ ಜಾನಕಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಇಬ್ರಾಹಿಂ ಶಾಫಿ ಆಯ್ಕೆಯಾದರು.

ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಇಬ್ರಾಹಿಂ ಶಾಫಿ ಹಾಗೂ ಬಿಜೆಪಿ ಬೆಂಬಲಿತ ಕೆ.ಪ್ರಭಾಕರ್ ಸ್ಪರ್ಧಿಸಿದ್ದರು. ಕೆ.ಪ್ರಭಾಕರ್ ಅವರು 7 ಮತಗಳು ಹಾಗೂ ಇಬ್ರಾಹಿಂ ಶಾಫಿ ಅವರು 23 ಮತಗಳನ್ನು ಪಡೆದರು.

ಇಬ್ರಾಹಿಂ ಶಾಫಿ ಮಾತನಾಡಿ, ‘ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಆಶ್ರಯ ನಿವೇಶನ ನೀಡಲು ಇರುವ ತೊಡಕುಗಳನ್ನು ಸರಿಪಡಿಸುವುದು ನಮ್ಮ ಮುಂದಿರುವ ಸವಾಲು’ ಎಂದರು.

ADVERTISEMENT

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾ ನಾಯ್ಕ, ಪಿಡಿಒ ರಾಮಪ್ಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ನಿಕಟಪೂರ್ವ ಅಧ್ಯಕ್ಷೆ ಅಂಬುಜಾ, ಎಂ.ಜೆ.ಮಹೇಶಾಚಾರ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಂತೋಷ್ ಕುಮಾರ್, ಮುಖಂಡರಾದ ಎಸ್.ಜಯಪ್ರಕಾಶ್, ಮಹಮ್ಮದ್ ಹನೀಫ್, ಜಾನ್ ಡಿಸೋಜ, ಎಂ.ಎಸ್.ಅರುಣೇಶ್, ಶಿವಪ್ಪ, ಶೇಖರ, ಹೂವಮ್ಮ, ಶಶಿಕಲಾ, ಜಯಂತಿ, ಸರಿತಾ, ಚಂದ್ರಮ್ಮ, ಮಹಮ್ಮದ್ ಜುಹೇಬ್‌, ಜಮೀರ್ ಅಹಮ್ಮದ್ ಚೆನ್ನಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.