ADVERTISEMENT

ಸಾತ್ಕೋಳಿ | ಭಾರಿ ಮಳೆ: ಹಳ್ಳದಲ್ಲಿ ಕೊಚ್ಚಿಹೋದ ಹಸು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:23 IST
Last Updated 24 ಅಕ್ಟೋಬರ್ 2024, 14:23 IST
ನರಸಿಂಹರಾಜಪುರ ತಾಲ್ಲೂಕು ಸಾತ್ಕೋಳಿ ಗ್ರಾಮದ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳ ಉಕ್ಕಿ ಹರಿದು ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿತು
ನರಸಿಂಹರಾಜಪುರ ತಾಲ್ಲೂಕು ಸಾತ್ಕೋಳಿ ಗ್ರಾಮದ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳ ಉಕ್ಕಿ ಹರಿದು ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿತು   

ಸಾತ್ಕೋಳಿ(ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿಯ ಗ್ರಾಮದ ಹಳ್ಳದಲ್ಲಿ ಬುಧವಾರ ಸಂಜೆ ಭಾರಿ ಮಳೆಗೆ 2 ಹಸುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ.

ಸಾತ್ಕೋಳಿ ಮಾರ್ಗ ಮಧ್ಯೆ ಹಳ್ಳ ಸಿಗುತ್ತದೆ. ಈ ಹಳ್ಳಕ್ಕೆ ಸಣ್ಣ ಪೈಪ್‌ ಹಾಕಿ ಮೋರಿ ನಿರ್ಮಿಸಲಾಗಿದೆ. ಧಾರಾಕಾರ ಮಳೆಯಿಂದ ನೀರು ಉಕ್ಕಿ ರಸ್ತೆಯ ಮೇಲೆ ಹರಿದು, ರಸ್ತೆಯ ಮೇಲಿನಿಂದ ಬರುತ್ತಿದ್ದ ಸಾತ್ಕೋಳಿ ಗ್ರಾಮದ ನಾಗೇಶ ಮತ್ತು ನಾಗರತ್ನಾ ಎಂಬುವರಿಗೆ ಸೇರಿದ ಹಸುಗಳು ನೀರಿನಲ್ಲಿ ತೇಲಿಕೊಂಡು ಹೋಗಿವೆ.

ಇದೇ ಹಳ್ಳದಲ್ಲಿ ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕಾರು ಕೊಚ್ಚಿಕೊಂಡು ಹೋಗಿ ಒಬ್ಬರು ಮೃತ ಪಟ್ಟಿದ್ದರು. ಹಲವು ವರ್ಷಗಳಿಂದ  ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಅಡಿಕೆ, ಭತ್ತಕ್ಕೆ ಹಾನಿ:

ಮಳೆಯಿಂದಾಗಿ  ಗ್ರಾಮದ ರಾಮಣ್ಣ, ಗಂಗಣ್ಣ, ಪುಟ್ಟಸ್ವಾಮಿ, ಲಿಂಗಣ್ಣ ಮುಂತಾದವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ.  ಮಂಜುನಾಥ, ನಾಗರತ್ನಾ, ನಾಗಪ್ಪ, ಕೃಷ್ಣಪ್ಪ ಎಂಬುವರ ಗದ್ದೆಗಳಿಗೆ ಕೆಸರು ನೀರು ನುಗ್ಗಿ ಭತ್ತದ ಪೈರು ಹಾಳಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.