ಮೂಡಿಗೆರೆ: ತಾಲ್ಲೂಕಿನಾದ್ಯಂತ ಗುರುವಾರ ಮಳೆ ಮುಂದುವರಿದಿದ್ದು ವಿವಿಧೆಡೆ ಧಾರಾಕಾರವಾಗಿ ಸುರಿಯಿತು.
ನಸುಕಿನಿಂದಲೂ ಜಿಟಿಜಿಟಯಾಗಿ ಸುರಿಯುತ್ತಿದ್ದ ಮಳೆ, ಬೆಳಿಗ್ಗೆ ಗಾಳಿಯೊಂದಿಗೆ ಧಾರಾಕಾರವಾಗಿ ಸುರಿದಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಯಿತು.
ಮಳೆಯಿಂದ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಗೂಲ್ ಗ್ರಾಮದ ಜಯಂತಗೌಡ ಎಂಬುವವರ ಮನೆಯ ದನದ ಕೊಟ್ಟಿಗೆ ಕುಸಿದು ನಷ್ಟ ಉಂಟಾಗಿದೆ. ಮಳೆಯಿಂದ ನದಿಗಳು ತುಂಬಿ ಹದಿಯುತ್ತಿದ್ದು, ಜಿ. ಹೊಸಳ್ಳಿಯಲ್ಲಿ ಸಸಿಮಡಿಗಳಿಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.