ADVERTISEMENT

ಶೃಂಗೇರಿಯಲ್ಲಿ ಜೋರಾದ ಮಳೆ; ತುಂಗಾನದಿಯ ನೀರಿನ ಮಟ್ಟ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:38 IST
Last Updated 24 ಮೇ 2025, 14:38 IST
ಮಳೆಯಿಂದ ತುಂಗಾನದಿಯ ನೀರಿನ ಮಟ್ಟ ಏರಿಕೆಯಾಗಿರುವುದು
ಮಳೆಯಿಂದ ತುಂಗಾನದಿಯ ನೀರಿನ ಮಟ್ಟ ಏರಿಕೆಯಾಗಿರುವುದು   

ಶೃಂಗೇರಿ: ಶೃಂಗೇರಿಯಲ್ಲಿ ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆಯು ಶನಿವಾರವೂ ಮುಂದುವರೆದಿದ್ದು, ತುಂಗಾನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ತಾಲ್ಲೂಕಿನ ಕೆರಕಟ್ಟೆ, ನೆಮ್ಮಾರ್, ತೆಕ್ಕೂರು, ವೈಕುಂಠಪುರ, ಕುಂಚೇಬೈಲ್, ಮೆಣಸೆ, ಮಸಿಗೆ, ಹಾಲಂದೂರು, ಹೊಳೆಕೊಪ್ಪ, ಬೇಗಾರ್ ಪ್ರದೇಶಗಳಲ್ಲಿ ಅಧಿಕ ಹೆಚ್ಚು ಮಳೆ ಸುರಿದಿದೆ.

ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಶಿರ್ಲು, ನೆಮ್ಮಾರ್, ಕಿಗ್ಗಾ, ಬಾಗೋಡು, ಗಳ್ಮುಡಿ, ಕುಂಚೇಬೈಲ್, ಅಡ್ಡಗದ್ದೆ, ಕೆಳಕೊಪ್ಪ ಮತ್ತು ಹನುಮಂತ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ.

ADVERTISEMENT
ಶೃಂಗೇರಿಯ ಹನುಮಂತ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.