ADVERTISEMENT

ಹೆಲಿಪ್ಯಾಡ್‌ ಸಜ್ಜು: ಮರಗಳ ಹನನ

ಶೃಂಗೇರಿಗೆ ರಾಷ್ಟ್ರಪತಿ ಭೇಟಿ ನಾಳೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:38 IST
Last Updated 6 ಅಕ್ಟೋಬರ್ 2021, 16:38 IST
ಶೃಂಗೇರಿಯ ಗಾಂಧಿ ಮೈದಾನದಲ್ಲಿ ಹೆಲಿಪ್ಯಾಡ್‌ ಸಜ್ಜುಗೊಳಿಸಲು ಮೈದಾನದ ಬದಿಯ ಮರಗಳನ್ನು ಹನನ ಮಾಡಿರುವುದು.
ಶೃಂಗೇರಿಯ ಗಾಂಧಿ ಮೈದಾನದಲ್ಲಿ ಹೆಲಿಪ್ಯಾಡ್‌ ಸಜ್ಜುಗೊಳಿಸಲು ಮೈದಾನದ ಬದಿಯ ಮರಗಳನ್ನು ಹನನ ಮಾಡಿರುವುದು.   

ಚಿಕ್ಕಮಗಳೂರು: ಜಿಲ್ಲೆಯ ಶಾರದಾಂಬೆ ಸನ್ನಿಧಿಗೆ ಅ. 8ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭೇಟಿ ನೀಡಲಿದ್ದು, ಹೆಲಿಪ್ಯಾಡ್‌ ಸಜ್ಜುಗೊಳಿಸಲು ಪಟ್ಟಣದ ಗಾಂಧಿ ಮೈದಾನದ ಬದಿಯ ಕೆಲ ಮರಗಳನ್ನು ಕಡಿಯಲಾಗಿದೆ.

ಮೈದಾನದಲ್ಲಿ ಒಟ್ಟು ಮೂರು ಹೆಲಿಪ್ಯಾಡ್‌ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಬದಿಯ ಉದ್ಯಾನದ ಕೆಲ ಮರಗಳನ್ನು ಹನನ ಮಾಡಲಾಗಿದೆ. ಹೆಲಿಪ್ಯಾಡ್‌ಗೆ ಮರಗಳನ್ನು ಕಡಿದಿರುವುದಕ್ಕೆ ಪರಿಸರಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೆಲಿಪ್ಯಾಡ್‌ ನಿರ್ಮಾಣಕ್ಕೆ ಮೈದಾನದಲ್ಲಿ ಎರಡು ಗುಲ್‌ಮೊಹರ್‌ ಮರಗಳನ್ನು ಕಡಿಯಲಾಗಿದೆ. ಕೊಂಬೆಗಳ್ನು ಮಾತ್ರ ಕತ್ತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

8ರಂದು ಬೆಳಿಗ್ಗೆ 11.30ಕ್ಕೆ ಶೃಂಗೇರಿಗೆ ರಾಷ್ಟ್ರಪತಿ ಭೇಟಿ ನಿಗದಿಯಾಗಿದೆ.

ರಾಷ್ಟ್ರಪತಿ ಭೇಟಿ ನಿಮಿತ್ತ ಗಾಂಧಿ ಮೈದಾನದ ಸುತ್ತಲಿನ ಗೂಡಂಗಡಿ, ಹೋಟೆಲ್‌ ಮೊದಲಾದವನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.