ADVERTISEMENT

ನರಸಿಂಹರಾಜಪುರ | ತೋಟಗಾರಿಕಾ ಇಲಾಖೆ: ರೈತರಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 12:50 IST
Last Updated 5 ಜೂನ್ 2025, 12:50 IST
<div class="paragraphs"><p>ಅರ್ಜಿ ಆಹ್ವಾನ</p></div>

ಅರ್ಜಿ ಆಹ್ವಾನ

   

ನರಸಿಂಹರಾಜಪುರ: ತೋಟಗಾರಿಕೆ ಇಲಾಖೆಯಿಂದ ನರಸಿಂಹರಾಜಪುರ ತಾಲ್ಲೂಕಿಗೆ 2025–26ನೇ ಸಾಲಿಗೆ ನಿಗದಿಪಡಿಸಿರುವ ವಿವಿಧ ಯೋಜನೆಗಳಿಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆರ್ಥಿಕ ಗುರಿ ಮಿತಿ ಅನ್ವಯ ರಾಷ್ಟ್ರೀಯ ತೋಟಗಾರಿಕಾ ಮಿಷನ್ (ಎನ್ಎಚ್‌ಎಂ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ (ಸಿಎಚ್‌ಡಿ), ತೋಟಗಾರಿಕೆಯಲ್ಲಿ ಯಾಂತ್ರೀಕರಣ, ಹನಿನೀರಾವರಿ, ಸ್ಪ್ರಿಂಕ್ಲರ್, ಜೇನುಪೆಟ್ಟಿಗೆ ಖರೀದಿ, ತಾಳೆ ಬೆಳೆ ಯೋಜನೆ, ಎಸ್–11, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯಕ್ರಮ ಕೈಗೊಳ್ಳಲು ಅರ್ಜಿ ಸಲ್ಲಿಸಬಹುದು.

ADVERTISEMENT

ಆಸಕ್ತರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.