ಕೊಪ್ಪ: ತಾಲ್ಲೂಕಿನಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಭಾನುವಾರ ಸಂಜೆ ಹೊತ್ತಿಗೆ ಜೋರು ಮಳೆಯಾಗಿತ್ತು.
ಜೋರು ಗಾಳಿ, ಮಳೆಗೆ ತಾಲ್ಲೂಕಿನ ತಲಮಕ್ಕಿ ಗ್ರಾಮದ ಮುತ್ತುಗದಾನಿ ನಿವಾಸಿ ಪದ್ಮಾವತಿ ಅವರ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ವರ್ಷ ಜೂನ್ 23ರ ಹೊತ್ತಿಗೆ ಒಟ್ಟು 43.43 ಸೆಂ.ಮೀ ಮಳೆಯಾಗಿತ್ತು. ಈ ಬಾರಿ 88.01 ಸೆಂ.ಮೀ. ಮಳೆ ದಾಖಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮಳೆ ಇಳಿಮುಖವಾಗಿತ್ತು. ಸೋಮವಾರ ಇಡೀ ದಿನ ಆಗಾಗ್ಗೆ ಬಿರುಸು ಮಳೆ ಸುರಿಯಿತು. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಅಡಿಕೆ ತೋಟಕ್ಕೆ ಔಷಧ ಸಿಂಪಡಿಸುವ ಕೆಲಸ ನಿಧಾನವಾಗಿ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.