ADVERTISEMENT

ಕಡೂರು: ನಾಪತ್ತೆಯಾಗಿದ್ದ ಅರಣ್ಯ ರಕ್ಷಕ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:38 IST
Last Updated 4 ಜುಲೈ 2025, 15:38 IST
ಶರತ್‌
ಶರತ್‌   

ಕಡೂರು (ಚಿಕ್ಕಮಗಳೂರು): ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ‌ಅರಣ್ಯ ರಕ್ಷಕ ಶರತ್‌ (33) ಶವವಾಗಿ ಪತ್ತೆಯಾಗಿದ್ದಾರೆ. 

ಮಡಿಕೇರಿಯವರಾದ ಶರತ್‌ ನಾಪತ್ತೆಯಾಗಿದ್ದಾಗ ನೀಲಗಿರಿ ತೋಪಿನಲ್ಲಿ ಅವರು ಬಳಸುತ್ತಿದ್ದ ಬೈಕ್‌ ಮತ್ತು ಜರ್ಕಿನ್‌ ಪತ್ತೆಯಾಗಿತ್ತು. ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶುಕ್ರವಾರ ಸಖರಾಯಪಟ್ಟಣ ಸಮೀಪದ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಸ್ತಿನಾಪುರ ಸರ್ವೆ ನಂ. 6ರ ನೀಲಗಿರಿ ನೆಡುತೋಪಿನಲ್ಲಿ ನಗ್ನ ಹಾಗೂ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರೀಕ್ಷೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಶವವನ್ನು ಕಳಿಸಲಾಗಿದೆ. ಸಖರಾಯಪಟ್ಟಣ ಪೊಲೀಸರು ತನಿಖೆ ಮುಂದುವರೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.