ADVERTISEMENT

ಕಳಸದಲ್ಲಿ ಬಂದ್; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:07 IST
Last Updated 5 ಮೇ 2025, 13:07 IST
ಕಳಸದಲ್ಲಿ ಸೋಮವಾರ ಹಿಂದುತ್ವಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಸ್ಪಂದಿಸಿ ವರ್ತಕರು ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆಯಲಿಲ್ಲ
ಕಳಸದಲ್ಲಿ ಸೋಮವಾರ ಹಿಂದುತ್ವಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಸ್ಪಂದಿಸಿ ವರ್ತಕರು ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆಯಲಿಲ್ಲ    

ಕಳಸ: ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆ  ಮತ್ತು ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಖಂಡಿಸಿ ಹಿಂದುತ್ವಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಕರೆಗೆ ಪಟ್ಟಣದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು.  ಹೊಟೆಲ್, ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ.  ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು.

ಬಜರಂಗ ದಳ,  ವಿಶ್ವಹಿಂದೂ ಪರಿಷತ್ ಮುಖಂಡರು ಹಾಗೂ ಕಾರ್ಯಕರ್ತರು ಆಂಜನೇಯ ದೇವಸ್ಥಾನದಿಂದ ಆರಂಭಿಸಿ ಮುಖ್ಯ ರಸ್ತೆ ಮೂಲಕ ಕಳಸೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.

ಮುಖ್ಯ ರಸ್ತೆಯಲ್ಲಿ ರಸ್ತೆ ತಡೆದು, ಘೋಷಣೆಗಳನ್ನು ಕೂಗಿದರು. ಅಜಿತ್ ಕುಲಾಲ್, ಬಾಲಕೃಷ್ಣ ಕಾಮತ್, ಬಾಲಕೃಷ್ಣ ಪ್ರಭು, ಸಂತೋಷ್ ಮಾತನಾಡಿದರು. ಮುಖಂಡರಾದ ಶೇಷಗಿರಿ, ಗಿರೀಶ್ ಹೆಮ್ಮಕ್ಕಿ, ಶ್ರೀಕಾಂತ್, ಜಗದೀಶ್, ಸುಂದರ್ ಮತ್ತಿತರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.