ADVERTISEMENT

ಕಾರ್ಮಣ್ಣು: ಪಾರ್ಶ್ವನಾಥ, ಪದ್ಮಾವತಿ, ವರಮಹಾಲಕ್ಷ್ಮಿ ಪ್ರತಿಷ್ಠೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 13:46 IST
Last Updated 23 ಏಪ್ರಿಲ್ 2025, 13:46 IST
ಕಳಸ ತಾಲ್ಲೂಕಿನ ಸಂಸೆಯ ಕಾರ್ಮಣ್ಣಿನಲ್ಲಿ ನಿರ್ಮಾಣವಾಗಿರುವ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಬ್ರಹ್ಮಯಕ್ಷ, ಪದ್ಮಾವತಿ ಮತ್ತು ವರಹಾಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿರುವುದು
ಕಳಸ ತಾಲ್ಲೂಕಿನ ಸಂಸೆಯ ಕಾರ್ಮಣ್ಣಿನಲ್ಲಿ ನಿರ್ಮಾಣವಾಗಿರುವ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಬ್ರಹ್ಮಯಕ್ಷ, ಪದ್ಮಾವತಿ ಮತ್ತು ವರಹಾಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿರುವುದು   

ಕಳಸ: ಸಂಸೆ ಗ್ರಾಮದ ಕಾರ್ಮಣ್ಣು ಪ್ರದೇಶದಲ್ಲಿ ನಿರ್ಮಿಸಿದ ಬಸದಿಯಲ್ಲಿ ಪಾರ್ಶ್ವನಾಥ ತೀರ್ಥಂಕರ, ಬ್ರಹ್ಮಯಕ್ಷ, ಪದ್ಮಾವತಿ ಮತ್ತು ವರಮಹಾಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಪಾರ್ಶ್ವನಾಥ ತೀರ್ಥಂಕರರಿಗೆ 5 ದಿನಗಳ ಕಾಲ ಗರ್ಭಾವತರಣ ಕಲ್ಯಾಣ, ಜನ್ಮ ಕಲ್ಯಾಣ, ಬಾಲ ಲೀತೋತ್ಸವ, ವೈರಾಗ್ಯ, ದೀಕ್ಷ ಕಲ್ಯಾಣ, ಮೋಕ್ಷ ಕಲ್ಯಾಣ ಮತ್ತು ಕೇವಲಜ್ಞಾನ ಕಲ್ಯಾಣದ ವಿಧಿಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ವರಮಹಾಲಕ್ಷ್ಮಿ, ಬ್ರಹ್ಮಯಕ್ಷ ಮತ್ತು ಪದ್ಮಾವತಿ ಯಕ್ಷಿಯರ ಪ್ರತಿಷ್ಠೆಯೂ ಭಕ್ತರ ಸಡಗರದ ನಡುವೆ ನೆರವೇರಿತು. ಗುಣಭದ್ರ ನಂದಿ ಮುನಿಗಳ ನೇತೃತ್ವದಲ್ಲಿ ನಡೆದ ಪಂಚಕಲ್ಯಾಣದಲ್ಲಿ ತಾಲ್ಲೂಕಿನ ಜೈನ ಧರ್ಮೀಯರು ಭಾಗವಹಿಸಿದ್ದರು.

ADVERTISEMENT

ಪ್ರತಿದಿನವೂ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾರ್ಮಣ್ಣು ಕುಟುಂಬದ ನಾಗರಾಜ್, ಧರಣೇಂದ್ರ, ಪ್ರಮೋದ್ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.