ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ನಂತರ ಮಳೆ ಬಿರುಸು ಪಡೆದುಕೊಂಡಿದೆ.
ಕೊಪ್ಪ, ಕಳಸ, ಮೂಡಿಗೆರೆ, ಕುದುರೆಮುಖ, ಬಾಳೆಹೊನ್ನೂರು, ಆಲ್ದೂರು, ಕೊಟ್ಟಿಗೆಹಾರ ಭಾಗದಲ್ಲಿ ಮಳೆ ಜೋರಾಗಿದೆ. ಮುಳ್ಳಯ್ಯನಗಿರಿ ಭಾಗದಲ್ಲೂ ಮಳೆ ಬಿರುಸಾಗಿದ್ದು, ಚಿಕ್ಕಮಗಳೂರಿನ ಕವಿಕಲ್ ಗಂಡಿ ಬಳಿ ರಸ್ತೆಗೆ ಮಣ್ಣ ಜರಿದಿದೆ.
ಕಲ್ಲೊಂದು ರಸ್ತೆಗೆ ಉರುಳಿದ್ದು, ಪೊಲೀಸರು ಮತ್ತು ಪ್ರವಾಸಿ ಮಿತ್ರರು ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.