ADVERTISEMENT

ಕೊಪ್ಪ | ಮಾದಕ ವಸ್ತು ಮುಕ್ತ ಕರ್ನಾಟಕ : ಭಿತ್ತಿಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:38 IST
Last Updated 4 ಸೆಪ್ಟೆಂಬರ್ 2025, 4:38 IST
ಕೊಪ್ಪ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನ ಭಿತ್ತಿಪತ್ರ, ಕರಪತ್ರ ಬಿಡುಗಡೆ ಮಾಡಲಾಯಿತು
ಕೊಪ್ಪ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನ ಭಿತ್ತಿಪತ್ರ, ಕರಪತ್ರ ಬಿಡುಗಡೆ ಮಾಡಲಾಯಿತು   

ಕೊಪ್ಪ: ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದ ಭಿತ್ತಿಪತ್ರವನ್ನು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಬಿಡುಗಡೆ ಮಾಡಿದರು.

‘ಮಾದಕ ಪದಾರ್ಥ ವ್ಯಸನವು ಹೂವಿನಂತೆ ಕಾಣಿಸಿದರೂ ಅದರ ಒಳಗೆ ವಿಷ ತುಂಬಿದ ಮುಳ್ಳುಗಳಿವೆ. ಅದು ಜೀವವನ್ನು ಕಸಿದುಕೊಳ್ಳುತ್ತದೆ. ಈ ಸವಾಲನ್ನು ಎದುರಿಸಲು ಕೇವಲ ಕಾನೂನು ಸಾಕಾಗದು ಜಾಗೃತಿ, ಸಹಾನುಭೂತಿ ಮತ್ತು ಪುನರ್ವಸತಿ ಈ ಮೂರು ಅಸ್ತ್ರಗಳು ಅಗತ್ಯ. ಪ್ರತಿಯೊಬ್ಬ ನಾಗರಿಕರೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಹಾದಿಯಲ್ಲಿ ಹೆಜ್ಜೆ ಹಾಕಿದಾಗ ಮಾತ್ರ ಸಾಧ್ಯವಾಗುತ್ತದೆ’ ಎಂದು ನವೀನ್ ಕುಮಾರ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಪ್ರಮೋದ್, ಸಹಾಯಕ ನಿರ್ದೇಶಕ (ಗ್ರಾ.ಉ) ಚೇತನ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ನವೀನ್, ಮುಖ್ಯ ಪಶು ವೈದ್ಯಾಧಿಕಾರಿ ಪ್ರದೀಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಿರೀಟಿ, ವಲಯ ಮೇಲ್ವಿಚಾರಕಿ ಚೈತ್ರ, ಅನುಶ್ರೀ, ಶ್ವೇತಾ, ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.