ಚಿಕ್ಕಮಗಳೂರು: ‘ಬಿಜೆಪಿಯಲ್ಲೂ ಅಧಿಕಾರ ಮತ್ತು ಆಯಕಟ್ಟಿನ ಹುದ್ದೆಗಳಿಗಾಗಿ ತಕರಾರುಗಳು ಎದ್ದಿವೆ. ಇದು ಜನರ ಮೇಲೆ ಭಾರಿ ಪರಿಣಾಮ ಬೀರುವುದಿಲ್ಲ. ನಮ್ಮ ಹೋರಾಟದ ಮೇಲೆ ಪರಿಣಾಮ ಬೀರಲಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
‘ವಿರೋಧ ಪಕ್ಷದಲ್ಲಿ ಆಂತರಿಕ ಭಿನ್ನಮತ ಇದ್ದರೆ ಪಕ್ಷದ ಮೇಲಷ್ಟೇ ಪರಿಣಾಮ ಬೀರಲಿದೆ. ಆಡಳಿತ ಪಕ್ಷದಲ್ಲಿ ಹಗ್ಗ ಜಗ್ಗಾಟ ಇದ್ದರೆ ಸರ್ಕಾರದ ಯೋಜನೆಗಳು ಜನರಿಗೆ ತಲುಪುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮಂತ್ರಿಗಳೇ ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಇದ್ದರೆ ಆಡಳಿತ ಹಿಡಿತ ತಪ್ಪುತ್ತದೆ. ದರೋಡೆ ಮಾಡುವರರು ರಾಜಾರೋಷವಾಗಿ ಮಾಡುತ್ತಾರೆ’ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು.
ಸಾಂಪ್ರದಾಯಿಕವಾಗಿ ನಡೆಯುವ ಯಕ್ಷಗಾನ ತಡೆಯಲು ಪೊಲೀಸರನ್ನು ನಿಯೋಜಿಸುವ ಬದಲು ದರೋಡೆ ಮಾಡುವವರ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ರಾಜ್ಯದ ಜನ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.