ಕೊಟ್ಟಿಗೆಹಾರ: ಕೊಟ್ಟಿಗೆಹಾರದಿಂದ ನಿಡುವಾಳೆ, ಮಾಗುಂಡಿಯಿಂದ ಕುದುರೆಮುಖಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಗುಂಡಿಗಳ ಆಗರವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಕೊಟ್ಟಿಗೆಹಾರದಿಂದ ಮಾಗುಂಡಿವರೆಗೆ ರಸ್ತೆ ಹದಗೆಟ್ಟಿದ್ದು, ಕಾರು ಮತ್ತು ದ್ವಿಚಕ್ರ ವಾಹನಗಳು ಈ ಮಾರ್ಗದಲ್ಲಿ ಹರಸಾಹಸ ಪಟ್ಟು ಸಾಗಬೇಕಿವೆ. ಬಾಳೂರು, ನಿಡುವಾಳೆ, ಕೂವೆ, ಬಾಳೆಹೊನ್ನೂರು, ಕಳಸ ಹೊರನಾಡಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿಡುವಾಳೆ ಪರಿಸರದಲ್ಲಿ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಕೊಟ್ಟಿಗೆಹಾರದಿಂದ ಮಾಗುಂಡಿವರೆಗಿನ 15 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗುಂಡಿ ಮುಚ್ಚದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ನಿಡುವಾಳೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕೊಟ್ಟಿಗೆಹಾರ- ನಿಡುವಾಳೆ ಮಾಗುಂಡಿಯಿಂದ ಕುದುರೆಮುಖಕ್ಕೆ ಸಂಪರ್ಕ ಕಲ್ಪಿಸುವ ಗಂಗಾಮೂಲ ರಸ್ತೆ (ರಾಜ್ಯ ಹೆದ್ದಾರಿ) ಹಲವು ವರ್ಷಗಳಿಂದ ಗುಂಡಿಗಳಿಂದ ಹದಗೆಟ್ಟಿದೆ. ಸದ್ಯಕ್ಕೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಬೇಕು, ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು
ನವೀನ್ ಹಾವಳಿ, ಗ್ರಾ.ಪಂ.ಉಪಾಧ್ಯಕ್ಷ, ನಿಡುವಾಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.