ಕಡೂರು: ಕನ್ನಡ ಜಾನಪದ ಪರಿಷತ್‌ನ ದತಶಮಾನೋತ್ಸವ ಆಚರಣೆ ಪ್ರಯುಕ್ತ ರಾಜ್ಯ ಪ್ರಥಮ ಜಾನಪದ ಸಮ್ಮೇಳನದಲ್ಲಿ ತಾಲ್ಲೂಕಿನ ಕುಪ್ಪಾಳು ಗ್ರಾಮದ ಸಂಗೀತ ಶಿಕ್ಷಕಿ ಕೆ.ಎಸ್.ಸಂಗೀತಾ ಅವರಿಗೆ ‘ರಾಜ್ಯ ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ.
ಕೆ.ಎಸ್.ಸಂಗೀತಾ ಅವರು, ಮಕ್ಕಳಿಗೆ ಜನಪದ ಗೀತೆಗಳನ್ನು ಕಲಿಸುತ್ತಿರುವುದನ್ನು ಗುರುತಿಸಿದ ರಾಜ್ಯ ಪರಿಷತ್ ಅವರಿಗೆ ‘ರಾಜ್ಯ ಯುವ ಸಿರಿ ಪ್ರಶಸ್ತಿ’ ನೀಡಿ ಗೌರವಿಸಿದೆ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಮಾಹಿತಿ ನೀಡಿದರು.
ಇವರು, ತಾಲ್ಲೂಕಿನ ಕುಪ್ಪಾಳು ಗ್ರಾಮದ ಶಿಕ್ಷಕರಾದ ಕೆ.ಎಸ್.ಶ್ರೀನಿವಾಸ್ ಮತ್ತು ಶೋಭಾ ಶ್ರೀನಿವಾಸ್ ದಂಪತಿ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.