ತರೀಕೆರೆ: ಸೀನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ತರೀಕೆರೆ ಪ್ರಗತಿ ಲಿಜನ್ ವತಿಯಿಂದ ಕಾರ್ಮಿಕರ ದಿನ ಆಚರಿಸಲಾಯಿತು.
ಪಟ್ಟಣದ ಪುರಸಭೆಯ ಪೌರ ಕಾರ್ಮಿಕ ಮಹಿಳೆಯರಿಂದ ಕೇಕ್ ಕತ್ತರಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಿತಿ ಅಧ್ಯಕ್ಷೆ ಆಶಾ ಭೋಸ್ಲೆ, ‘ಕಾರ್ಮಿಕರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ನೀಡುವಂತ ಕೆಲಸವಾಗಬೇಕು’ ಎಂದರು.
ವಿಶಾಲ ಮಲ್ಲಿಕಾರ್ಜುನ್, ಕಾರ್ಮಿಕರು ದುಡಿದರೆ ಮಾಲೀಕರಾಗುವುದಕ್ಕೆ ಸಾಧ್ಯ. ಅವರನ್ನು ಗೌರವದಿಂದ ಕಾಣುವುದು ನಮ್ಮ ಧರ್ಮ ಎಂದರು.
ಸಮಿತಿ ಮಮತಾ ಮಲ್ಲಿಕಾರ್ಜುನ್, ನೇತ್ರ ನಾಗರಾಜ್, ನಾಗವೇಣಿ ಹರಳಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.