ADVERTISEMENT

ಲೆಫ್ಟಿನೆಂಟ್ ಕರ್ನಲ್ ಸಿ.ಎಸ್. ಜಯರಾಂ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:35 IST
Last Updated 1 ಜೂನ್ 2025, 12:35 IST
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮೂಡಿಗೆರೆ ತಾಲ್ಲೂಕಿನ ಚಕ್ಕುಡಿಗೆ ಗ್ರಾಮದ ಸಿ.ಎಸ್. ಜಯರಾಂ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮೂಡಿಗೆರೆ ತಾಲ್ಲೂಕಿನ ಚಕ್ಕುಡಿಗೆ ಗ್ರಾಮದ ಸಿ.ಎಸ್. ಜಯರಾಂ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು   

ಮೂಡಿಗೆರೆ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಗೋಣಿಬೀಡು ಹೋಬಳಿಯ ಚಕ್ಕುಡಿಗೆ ಗ್ರಾಮದ ಸಿ.ಎಸ್. ಜಯರಾಂ ಅವರನ್ನು ಬೀಳ್ಕೊಡಲಾಯಿತು.

ಜಯರಾಂ ಅವರು, ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಈಚೆಗೆ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ತಡೆ ರಹಿತ ಸುರಕ್ಷಿತ ಆಪರೇಷನ್ ಕಮ್ಯುನಿಕೇಷನ್, ಸಿಗ್ನಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ಸ್ ವಾರ್ಫೇರ್‌, ಜಾಮ್ಮಿಂಗ್, ಸೈಬರ್ ಭದ್ರತೆ, ನೆಟ್‌ವರ್ಕ್‌ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಕ್ಕಾಗಿ ದೆಹಲಿಯಲ್ಲಿ ಲೆಫ್ಟಿನೆಂಟ್ ಜನರಲ್ ವಿನೋದ್ ಕುಮಾರ್, ಡೈರೆಕ್ಟರ್ ಜನರಲ್, ಕೋರ್ ಆಫ್ ಸಿಗ್ನಲ್ಸ್ ಅವರಿಂದ ಗೌರವ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT