ADVERTISEMENT

ಚಿಕ್ಕಮಗಳೂರು | ಲೋಕ ಅದಾಲತ್‌: 6504 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:14 IST
Last Updated 26 ಜೂನ್ 2022, 6:14 IST
ಚಿಕ್ಕಮಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಶುಭಾ ಗೌಡರ್‌, ನ್ಯಾಯಾಧೀಶರಾದ ಎ.ಎಸ್‌.ಸೋಮ ಪಾಲ್ಗೊಂಡಿದ್ದರು.
ಚಿಕ್ಕಮಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಶುಭಾ ಗೌಡರ್‌, ನ್ಯಾಯಾಧೀಶರಾದ ಎ.ಎಸ್‌.ಸೋಮ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ಜಿಲ್ಲೆಯ ಕೋರ್ಟ್‌ಗಳಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 6504 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಜಿಲ್ಲೆಯ 22 ಪೀಠಗಳಲ್ಲಿ ಲೋಕ ಅದಾಲತ್‌ ನಡೆಯಿತು. ಮೂರು ದಾಂಪತ್ಯ ಪ್ರಕರಣಗಳಲ್ಲಿ ಬೇರೆಯಾಗಿದ್ದ ದಂಪತಿ ಒಂದಾಗಿದ್ದಾರೆ.

ಕೋರ್ಟ್‌ಗಳಲ್ಲಿ ಬಾಕಿ ಇದ್ದ 19067 ಪ್ರಕರಣಗಳ ಪೈಕಿ 3733 ಇತ್ಯರ್ಥವಾಗಿವೆ. ಹಾಗೆಯೇ 10491 ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 2771 ಪ್ರಕರಣಗಳನ್ನು ಇತ್ಯರ್ಥವಾಗಿವೆ.

ADVERTISEMENT

ಒಟ್ಟು ಇತ್ಯರ್ಥ ಪ್ರಕರಣಗಳ ಮೊತ್ತ 12.34 ಕೋಟಿ. ಪಕ್ಷಗಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಅದಾಲತ್‌ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎ.ಎಸ್‌.ಸೋಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.