ADVERTISEMENT

ಸಾಮೂಹಿಕ ವಿವಾಹ | 4 ಜೋಡಿಗೆ ಅರ್ಜಿ ಸಲ್ಲಿಸಲು ಅವಕಾಶ: ಕಾಂಗ್ರೆಸ್‌ ನಾಯಕಿ ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 4 ಮೇ 2025, 13:59 IST
Last Updated 4 ಮೇ 2025, 13:59 IST
ಮೋಟಮ್ಮ
ಮೋಟಮ್ಮ   

ಮೂಡಿಗೆರೆ: ಆಶ್ರಯ ಸೇವಾ ಸಂಸ್ಥೆಯಿಂದ ಇದೇ 18ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯಲಿರುವ ಸರಳ ಸಾಮೂಹಿಕ ವಿವಾಹಕ್ಕೆ ಈಗಾಗಲೇ 5 ಜೋಡಿ ನೋಂದಣಿ ಮಾಡಿಕೊಂಡಿದ್ದು, ಇನ್ನೂ 4 ಜೋಡಿ ವಿವಾಹವಾಗಲು ಅವಕಾಶವಿದೆ, ಆಸಕ್ತರು  ಅರ್ಜಿ ಸಲ್ಲಿಸಬಹುದು ಎಂದು ಕಾಂಗ್ರೆಸ್‌ ನಾಯಕಿ ಮೋಟಮ್ಮ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈ ಬಾರಿಯ ಸರಳ ಸಾಮೂಹಿಕ ವಿವಾಹ 5 ಜೋಡಿಗೆ ಮಾತ್ರ ಸೀಮಿತಗೊಳಿಸುವುದಾಗಿ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದೆ, ಈಗ ಇನ್ನು ಹೆಚ್ಚುವರಿ 4 ಜೋಡಿ ಸೇರ್ಪಡೆಗೊಳಿಸಿ 9 ಜೋಡಿಯನ್ನು ವಿವಾಹ ನಡೆಸಲು ತಯಾರಿ ನಡೆಸಲಾಗಿದೆ. ವಧು-ವರರಿಗೆ ಬಟ್ಟೆ, ತಾಳಿ ಸೇರಿದಂತೆ ವಿವಿಧ ರೀತಿಯ ಪರಿಕರ ಒದಗಿಸಲಾಗುವುದು. ಕಾರ್ಯಕ್ರಮದಲ್ಲಿ ಅವಧೂತ ವಿನಯ ಗುರೂಜಿ, ಇಂದೂಧರ ಹೊನ್ನಾಪುರ, ಚಲನಚಿತ್ರ ನಟ ದಿಗಂತ್ ಸೇರಿದಂತೆ ಹಲವು ಮಂದಿ ಭಾಗವಹಿಸುವರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT