
ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ನಿವಾಸಿ ನವೀದ್ (28) ಜನವರಿ 8ರಂದು ಮನೆಯಿಂದ ಕಾಣೆಯಾಗಿದ್ದು, ಇದೀಗ ಕೃಷಿಹೊಂಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ನವೀದ್ ಮನೆಗೆ ಮರಳದೇ ಇದ್ದ ಹಿನ್ನೆಲೆ ಕುಟುಂಬದವರು ಹುಡುಕಾಟ ನಡೆಸಿದ್ದರು. ಬಳಿಕ, ಜ. 12ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಿಸಿದ್ದರು.
ಗುರುವಾರ ಸೂರಪ್ಪನಹಳ್ಳಿ ಗ್ರಾಮದ ಬಸವರಾಜಪ್ಪ ಎಂಬುವವರ ಕಾಫಿ ತೋಟದಲ್ಲಿ ನಿರ್ಮಿಸಲಾಗಿದ್ದ ಕೃಷಿಹೊಂಡದಲ್ಲಿ ನವೀದ್ ಅವರ ಮೃತದೇಹ ಪತ್ತೆಯಾಯಿತು. ಕೆಸರು ಮಿಶ್ರಿತ ಹೊಂಡದಿಂದ ಶವವನ್ನು ಹೊರತೆಗೆಯಲು ಆಲ್ದೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಕೆ.ಎಲ್. ಕುಮಾರ್ ಹಾಗೂ ಸದಸ್ಯರಾದ ಅನಿಲ್ ಕುಮಾರ್, ನಾಗರಾಜ್ ಸಹಕರಿಸಿದರು.
ನವೀದ್ ಅವರ ಸಹೋದರ ಫಯಾಜ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ರವಿ ಜಿ.ಎ., ಮೂರ್ತಪ್ಪ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.