
ಶೃಂಗೇರಿ: ‘ಕ್ಲಬ್ ಸಂಸ್ಕೃತಿಯು ಬ್ರಿಟಿಷರ ಕೊಡುಗೆಯಾಗಿದ್ದು, ಅವುಗಳನ್ನು ನಿರ್ಮಾಣ ಮಾಡುವುದರಿಂದ ಸಾಮಾಜಿಕ, ಆರ್ಥಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಉಪಯೋಗವಾಗುವ ಜತೆಗೆ ಸಾಮಾಜಿಕ ಸಂಪರ್ಕ ಹೆಚ್ಚಿಸುತ್ತದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಶೃಂಗೇರಿ ತಾಲ್ಲೂಕಿನ ಮೆಣಸೆಯ ಹೊಸ್ತೋಟದಲ್ಲಿ 275 ಜನ ಸದಸ್ಯರುಳ್ಳ ನೇಚರ್ ಕ್ಲಬ್‍ನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಲೆನಾಡಿನಲ್ಲಿ ಕ್ಲಬ್ ಸಂಸ್ಕೃತಿ ಬಂದಿದ್ದರಿಂದ ಕಾಫಿ ಬೆಳೆ ಹೆಚ್ಚಾಗಿ ಬೆಳೆಯಲು ಪ್ರಾರಂಭವಾಯಿತು. ಸಾರ್ವಜನಿಕರು ಕ್ಲಬ್‍ನಲ್ಲಿ ಒಂದೇ ಸ್ಥಳದಲ್ಲಿ ಸೇರುವ ಮೂಲಕ ಚರ್ಚೆ, ಸ್ನೇಹ ಮತ್ತು ಸಹಕಾರ ಹೆಚ್ಚಾಗುತ್ತದೆ. ನಂತರ, ಹೊಸ ಜನರನ್ನು ಪರಿಚಯವಾಗುವ ಅವಕಾಶ ಸಿಗುತ್ತದೆ. ಇದರಿಂದ ಮನೆಯಲ್ಲಿ ಮಹಿಳೆಯರಿಗೆ ಒತ್ತಡ ಕಡಿಮೆಯಾಗುತ್ತದೆ. ಕ್ಲಬ್‍ಗಳಲ್ಲಿ ಯಾವುದೇ ಜಾತಿ, ಮತ, ಧರ್ಮ ಮತ್ತು ರಾಜಕಾರಣ ಮಾಡಬಾರದು. ಆಗ ಕ್ಲಬ್ ಅಭಿವೃದ್ಧಿಯಾಗಿ ಸಮಾಜಕ್ಕೆ ಮಾದರಿಯಾಗುತ್ತದೆ’ ಎಂದರು.
ಲಯನ್ಸ್ ಕ್ಲಬ್‍ನ ಜಿಲ್ಲಾ ರಾಜ್ಯಪಾಲ ಎಚ್.ಜಿ. ವೆಂಕಟೇಶ್ ಮಾತನಾಡಿ, ‘ಶೃಂಗೇರಿ ಯಾತ್ರಾ ಸ್ಥಳವಾಗಿರುವುದರಿಂದ ಪ್ರವಾಸಿಗರಿಗೆ ವಸತಿ ನೀಡುವುದರ ಮೂಲಕ ಕ್ಲಬ್ ಆದಾಯ ಹೆಚ್ಚುತ್ತದೆ’ ಎಂದರು.
ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಮಾತನಾಡಿ, ‘ಕ್ಲಬ್‍ನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಸೃಷ್ಟಿಯಿಂದ ಸಮುದಾಯ ಅಭಿವೃದ್ಧಿಯಾಗಿ, ಯುವಕರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗುತ್ತದೆ’ ಎಂದರು.
ನೇಚರ್ ಕ್ಲಬ್ ಅಧ್ಯಕ್ಷ ಎಂ.ಎಚ್. ನಟರಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಮಂಜುನಾಥ್, ಪ್ರವೀಣ್ ಬಿಳುವೆ, ದಿವೀನ್ ರಾಜ್, ನವೀನ್ ದ್ವಾರಮಕ್ಕಿ, ಕ್ಲಬ್‍ನ ಆಡಳಿತ ಮಂಡಳಿಯ ಬಿ.ವಿ. ಪ್ರವೀಣ್, ಶಂಕರಪ್ಪ ಗೌಡ, ಎಚ್.ಎ. ಶಿವಮೂರ್ತಿ, ಎಚ್.ಆರ್. ಸತ್ಯನಾರಯಣ್, ಕೆ.ಎಸ್. ರಾಜೇಶ್, ಕೆ.ಎಂ. ಕೃಷ್ಣಪ್ಪ ಗೌಡ, ಕೆ.ಎನ್. ಗೋಪಾಲ್ ಹೆಗ್ಡೆ, ಕಲ್ಕುಳಿ ಜಗದೀಶ್ ಹೆಗ್ಡೆ, ಎ.ಆರ್. ನಾರಯಣ, ಎಚ್.ಎಸ್. ಗಣೇಶ್, ಪಿ.ಎಸ್. ಇಂಜಿತ್ ಕುಮಾರ್, ಎಚ್.ಜಿ. ತ್ರಿಮೂರ್ತಿ, ಎಂ.ಡಿ. ಪದ್ಮನಾಭ, ಡಿ.ಸಿ. ವಿನಯ್, ಎಚ್.ಆರ್. ಕೃಷ್ಣಮೂರ್ತಿ ಹೆಗ್ಡೆ, ಕೆ.ಎಸ್. ವೆಂಕಟೇಶ್, ಕೆ.ಎಸ್. ಗೋಪಾಲ್ ಇದ್ದರು.
ಕ್ಲಬ್‌ನಲ್ಲಿ 275 ಸದಸ್ಯರು ‘ನೇಚರ್ ಕ್ಲಬ್‍ನಲ್ಲಿ ಯಾವುದೇ ರಾಜಕಾರಣ ಜಾತಿ–ಮತಗಳ ಭೇದವಿಲ್ಲದೆ 19 ಜನ ಕಾರ್ಯಕಾರಿ ಮಂಡಳಿಯಲ್ಲಿದ್ದು 275 ಸದಸ್ಯರನ್ನು ಹೊಂದಿದೆ. ಇಲ್ಲಿ ರೈತರು ಮತ್ತು ಅವರ ಮಕ್ಕಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣ ಈಜುಕೋಳ ಟೆನಿಸ್ ಶಟಲ್ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಯಾನ ಉತ್ತಮ ರೀತಿಯ ವಸತಿ ಮತ್ತು ಆಹಾರ ವ್ಯವಸ್ಥೆ ಹೊಂದಿದೆ’ ಎಂದು ನೇಚರ್ ಕ್ಲಬ್ ಅಧ್ಯಕ್ಷ ಎಂ.ಎಚ್. ನಟರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.