ADVERTISEMENT

ಸಣ್ಣ ರೈತರ ಭೂಮಿ ಕಿತ್ತುಕೊಳ್ಳದಿರಿ: ವಿನಯ್ ಹಳೆಕೋಟೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:58 IST
Last Updated 16 ಏಪ್ರಿಲ್ 2025, 12:58 IST
ಸಣ್ಣ ರೈತರ ಭೂಮಿ ಕಿತ್ತುಕೊಳ್ಳಬಾರದು: ವಿನಯ್ ಹಳೆಕೋಟೆ
ಸಣ್ಣ ರೈತರ ಭೂಮಿ ಕಿತ್ತುಕೊಳ್ಳಬಾರದು: ವಿನಯ್ ಹಳೆಕೋಟೆ   

ಮೂಡಿಗೆರೆ: ಅಕ್ರಮ ಸಾಗುವಳಿ ಚೀಟಿಯ ಹೆಸರಿನಲ್ಲಿ ಸಣ್ಣ ರೈತರ ಭೂಮಿ ಕಿತ್ತುಕೊಳ್ಳಬಾರದು ಎಂದು ಬಿಜೆಪಿ ತಾಲ್ಲೂಕು ಘಟಕದ ವಕ್ತಾರ ವಿನಯ್‌ ಹಳೆಕೋಟೆ ಒತ್ತಾಯಿಸಿದ್ದಾರೆ.

‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡಿದ್ದ ಫಾರಂ 50 ಹಾಗೂ 53ರ ಅರ್ಜಿಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ. ಈ ಮೂಲಕ ತಾಲ್ಲೂಕಿನ ರೈತರ ಮೇಲೆ ಗದಾಪ್ರಹಾರ ನಡೆಸುತ್ತಿರುವ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ಕೃಷಿಯಿಂದ ಹಿಂದೆ ಸರಿಯುತ್ತಿದ್ದ ಸಮಯದಲ್ಲಿ ರೈತರು ಕೃಷಿ ಮಾಡಬೇಕೆಂಬ ದೃಷ್ಟಿಯಿಂದ ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಫಾರಂ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಹಕ್ಕುಪತ್ರ ನೀಡಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಇದರಿಂದಾಗಿ 2ರಿಂದ 4 ಎಕರೆ ಇರುವ ಸಣ್ಣ ರೈತರು ತಮ್ಮ ಭೂಮಿಯನ್ನು ಹಸನಾಗಿಸಿ ಜೀವನೋಪಾಯಕ್ಕೆ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಮೊದಲಾದ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಭೂಗಳ್ಳರಂತೆ ಬಿಂಬಿಸಿ ತಾಲ್ಲೂಕಿನಲ್ಲಿರುವ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದೆ. ಇದು ಸರ್ಕಾರಕ್ಕೆ ಶೋಭೆಯಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‌‘‍ತಾಲ್ಲೂಕಿನಲ್ಲಿ ಸರ್ಕಾರವೇ ನೀಡಿದ ಸಾವಿರಾರು ಮಂದಿ ರೈತರ ಭೂಮಿಯ ಹಕ್ಕುಪತ್ರವನ್ನು ವಜಾಗೊಳಿಸಲಾಗಿದೆ. 2ರಿಂದ 4 ಎಕರೆ ಭೂಮಿ ಹೊಂದಿರುವ ರೈತರ ಹೆಚ್ಚಿನ ಸಂಖ್ಯೆಯ ಹಕ್ಕುಪತ್ರವನ್ನೇ ಹೆಚ್ಚಾಗಿ ವಜಾಗೊಳಿಸಲಾಗಿದೆ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ರೈತರ ನೈಜ ಪರಿಸ್ಥಿತಿ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆದು ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕುʼ ಎಂದು ಅವರು ಒತ್ತಾಯಿಸಿದ್ದಾರೆ.

Highlights - ಸಣ್ಣ ರೈತರ ಭೂಮಿ ಕಿತ್ತುಕೊಳ್ಳಬಾರದು: ವಿನಯ್ ಹಳೆಕೋಟೆ ಆಕ್ರೋಶ ಮೂಡಿಗೆರೆ: “ಅಕ್ರಮ ಸಾಗುವಳಿ ಚೀಟಿ ಹೆಸರಿನಲ್ಲಿ ಸಣ್ಣ ರೈತರ ಭೂಮಿ ಕಿತ್ತುಕೊಳ್ಳುವ ಕ್ರಮ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು,” ಎಂದು ಬಿಜೆಪಿ ತಾಲ್ಲೂಕು ವಕ್ತಾರ ವಿನಯ್‌ ಹಳೆಕೋಟೆ ಆಗ್ರಹಿಸಿದ್ದಾರೆ. ಬುಧವಾರ ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿದ ಅವರು, “ಇದುವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷಿ ಪ್ರೇರಣೆಯುಳ್ಳ ಹಿನ್ನಲೆಯಲ್ಲಿ ಫಾರಂ 50 ಮತ್ತು 53 ಮೂಲಕ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ಈ ಹಕ್ಕುಪತ್ರಗಳ ಆಧಾರದಲ್ಲಿ ಸಣ್ಣ ರೈತರು ತಮ್ಮ 2 ರಿಂದ 4 ಎಕರೆ ಭೂಮಿಯಲ್ಲಿ ಕಾಫಿ, ಅಡಿಕೆ, ಕಾಳುಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅರ್ಜಿಗಳನ್ನು ರದ್ದುಗೊಳಿಸಿರುವುದು ಖಂಡನೀಯ,” ಎಂದರು. “ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ರೈತನನ್ನು ಭೂಗಳ್ಳರಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಸರ್ಕಾರವೇ ಮಾನ್ಯತೆ ನೀಡಿದ ಹಕ್ಕುಪತ್ರಗಳನ್ನು ಈಗ ವಜಾಗೊಳಿಸುತ್ತಿರುವುದು, ರೈತರನ್ನು ಬೀದಿಗೆ ತಳ್ಳುವಂತಹ ಕ್ರಮವಾಗಿದೆ. ಈ ಕ್ರಮ ಸರಕಾರದ ಮಾನಕ್ಕೆ ಶೋಭೆ ತರುವುದಿಲ್ಲ,” ಎಂದು ಅವರು ಹೇಳಿದರು. “ಇನ್ನೂ ಪ್ರಮುಖವಾಗಿ 2 ರಿಂದ 4 ಎಕರೆ ಭೂಮಿ ಹೊಂದಿರುವ ಸಾವಿರಾರು ಸಣ್ಣ ರೈತರ ಹಕ್ಕುಪತ್ರಗಳು ರದ್ದುಪಡಿಸಲಾಗಿದೆ. ತಮ್ಮ ಬದುಕಿನ ಆಧಾರವಾಗಿದ್ದ ಭೂಮಿಯನ್ನು ಕಳೆದುಕೊಂಡರೆ ರೈತರು ಹೇಗೆ ಬದುಕುವುದು ಎಂಬುದನ್ನು ಶಾಸಕರು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮೂಡಿಗೆರೆ ತಾಲ್ಲೂಕಿನ ನೈಜ ರೈತರ ಪರಿಸ್ಥಿತಿಯನ್ನು legislators ಸರ್ಕಾರದ ಗಮನಕ್ಕೆ ತರಬೇಕು ಮತ್ತು ಈ ಅನ್ಯಾಯ ತಡೆಯಲು ತಕ್ಷಣ ಕ್ರಮವಹಿಸಬೇಕು,” ಎಂದು ವಿನಯ್ ಹಳೆಕೋಟೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.