ADVERTISEMENT

ಮಳೆ ಅವಾಂತರ: 25ಕ್ಕೂ ಹೆಚ್ಚು ಮನೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 9:03 IST
Last Updated 7 ಸೆಪ್ಟೆಂಬರ್ 2022, 9:03 IST

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಬಿರುಸಾಗಿ ಮಳೆ ಸುರಿದಿದೆ. ಅಜ್ಜಂಪುರ ತಾಲ್ಲೂಕಿನ ಅರಬಲದಲ್ಲಿ 13, ತಿಮ್ಮಾಪುರದಲ್ಲಿ ಒಂಬತ್ತು ಹಾಗೂ ಜಾವೂರು ಹೊಸಹಳ್ಳಿಯಲ್ಲಿ ಮೂರು ಮನೆಗಳು ಹಾನಿಯಾಗಿವೆ. ಅತ್ತಿಮೊಗ್ಗೆ ಭಾಗದಲ್ಲಿ ತೋಟ, ಹೊಲಗಳಿಗೆ ನೀರು ನುಗ್ಗಿದೆ.

ಅಜ್ಜಂಪುರ ಪಟ್ಟಣದ ಶಿವಾಜಿ ರಸ್ತೆ, ಬನಶಂಕರಿ ರಸ್ತೆ, ಶ್ರೀರಾಮ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪಟ್ಟಣದ ಸಮೀಪದ ಗೌರಪುರದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಅಜ್ಜಂಪುರ, ನಾರಣಾಪುರ, ಶಿವನಿ, ಅನುವನಹಳ್ಳಿ ಭಾಗದಲ್ಲಿ ಹೊಲಗಳಿಗೆ ನೀರು ನುಗ್ಗಿದೆ. ಈರುಳ್ಳಿ, ಶೇಂಗಾ ಮೊದಲಾದ ಬೆಳೆಗಳು ಕೊಚ್ಚಿ ಹೋಗಿವೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಬಳಿ ಹವ್ವಳ್ಳಿ– ಹುಲಿಹಳ್ಳ ಸಂಪರ್ಕ ರಸ್ತೆ ಕುಸಿದಿದೆ. ಆಲ್ದೂರು– ಬಾಳೆಹೊನ್ನೂರು ಹೆದ್ದಾರಿ ಬದಿಯ ಮರವೊಂದು ನೆಲಕ್ಕುರುಳಿದೆ.

ADVERTISEMENT

ಅಜ್ಜಂಪುರ– 11.6,ಹೊಸಕೆರೆ– 8.4, ಮೇಗರಮಕ್ಕಿ– 7.8, ಎನ್‌.ಆರ್‌.ಪುರ– 7.3,
ಬುಕ್ಕಾಂಬುಧಿ– 6.7, ಕೊಟ್ಟಿಗೆಹಾರ– 6.4 ಸೆಂ.ಮೀ ಮಳೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.