ತರೀಕೆರೆ: ಪಟ್ಟಣದ ಬಿ.ಎಚ್.ರಸ್ತೆಯಲ್ಲಿನ ನವೀನ್ ಟೈಲ್ಸ್ ಮತ್ತು ಗ್ರಾನೆಟ್ ವ್ಯವಹಾರಕ್ಕೆ ಪುರಸಭೆಯಿಂದ ಪರವಾನಗಿ ಕೊಡಿಸಲು ₹50 ಸಾವಿರ ಲಂಚ ಪಡೆಯುತ್ತಿದ್ದ ಪುರಸಭಾ ಸದಸ್ಯ ಟಿ.ಎಂ. ರಂಗನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪರವಾನಗಿ ಕೊಡಿಸಲು ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಇದರ ಭಾಗವಾಗಿ ₹50 ಸಾವಿರ ಪಡೆಯುತ್ತಿದ್ದ ವೇಳೆ ಬಂಧಿಸಲಾಗಿದೆ. ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‍ಪಿ ಜೆ.ತಿರುಮಲೇಶ್ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೇಬಲ್ ಸಿ. ಲೋಕೇಶ್, ವಿಜಯಭಾಸ್ಕರ್, ಕಾನ್‌ಸ್ಟೇಬಲ್‌ಗಳಾದ ರವಿಚಂದ್ರ, ಮಲ್ಲಿಕಾರ್ಜುನ್, ಚಂದನ್ ಕುಮಾರ್, ಪ್ರಸಾದ್ ಎಂ. ಚಂದ್ರಶೆಟ್ಟಿ, ಮಜೀಬ್ ಖಾನ್, ಶ್ರೀಧರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.