ನರಸಿಂಹರಾಜಪುರ: ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಡಗಬೈಲು ಗ್ರಾಮದ ಕಣಿಗೇರಿಯ ಬ್ರಿಸೆಲ್ ಪತ್ರೋಸ್ ಅವರು, 5ನೇ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮೇ 15ರಂದು ಬಾಡಿ ಬಿಲ್ಡಿಂಗ್ ಫೆಡರೇಷನ್ ಸಾಯಿ ಕ್ಲಾಸಿಕ್-25 ಆಯೋಜಿಸಿದ್ದ ಮಿಸ್ಟರ್ ಸೌತ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಇವರು 5ನೇ ಸ್ಥಾನ ಗಳಿಸಿ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಪಡೆದುಕೊಂಡಿದ್ದಾರೆ.
ಇವರು, ಬಡಗಬೈಲು ಗ್ರಾಮದ ಕಣಿಗೇರಿಯ ಮೊಳೆಯಲ್ ಕುಟುಂಬದ ಎಂ.ಎ.ಪತ್ರೋಸ್ ಮತ್ತು ಶಾಲಿ ಅವರ ಪುತ್ರ.
ಮಲೆನಾಡಿನ ಯುವ ಪ್ರತಿಭೆಗಳಿಗೆ ಸರ್ಕಾರವು ಪ್ರೋತ್ಸಾಹ ನೀಡಿದರೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ತಾಲ್ಲೂಕು ಯಂಗ್ ಮನ್ ಕ್ರಿಶ್ಚಿಯನ್ ಅಸೋಷಿಯೇಷನ್‌ನ ಅಧ್ಯಕ್ಷ ಎಂ.ಪಿ.ಸನ್ನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.