ನರಸಿಂಹರಾಜಪುರ: ಪಟ್ಟಣದ ಮಿನಿವಿಧಾನ ಸೌಧ ವೃತ್ತದ ಬಳಿ ಭಾನುವಾರ ಸಂಜೆ ಲಾರಿಯೊಂದು ಡಿವೈಡರ್‌ನ್ನು ದಾಟಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಿಲ್ದಾಣ ಬಹುತೇಕ ಜಖಂ ಆಗಿದೆ.
ಬಿ.ಎಚ್.ಕೈಮರದ ಕಡೆಯಿಂದ ಬಂದ ಆಲ್ದೂರು ಮೂಲದ ಲಾರಿ ಡಿವೈಡರ್ ದಾಟಿ, ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಕೊಪ್ಪದ ರಮೇಶ್ ಎಂಬುವರು ಪಾನಮತ್ತನಾಗಿ ವಾಹನ ಚಾಲನೆ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.