ADVERTISEMENT

ಶರನ್ನವರಾತ್ರಿ ಸೇವಾ ಸಮಿತಿ : ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:44 IST
Last Updated 26 ಸೆಪ್ಟೆಂಬರ್ 2022, 15:44 IST
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ 24ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೋಮವಾರ ದೇವಿಯ ಪ್ರತಿಷ್ಠಾಪನೆ ನಡೆಯಿತು.
ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ 24ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೋಮವಾರ ದೇವಿಯ ಪ್ರತಿಷ್ಠಾಪನೆ ನಡೆಯಿತು.   

ನರಸಿಂಹರಾಜಪುರ: ಶರನ್ನವರಾತ್ರಿ ಸೇವಾ ಸಮಿತಿಯಿಂದ ಸೋಮವಾರ ವಿದ್ಯಾಗಣಪತಿ ಪೆಂಡಾಲ್ ನಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ 24ನೇ ವರ್ಷದ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಎಚ್.ಎಸ್.ಪ್ರಸನ್ನ ಹಾಗೂ ಮುರಳೀಧರ್ ಜೋಯಿಸ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಹವಾಚನ, ಸ್ಥಳ ಶುದ್ಧಿ, ಬಿಂಬ ಶುದ್ಧಿ ಧಾರ್ಮಿ ವಿಧಿ ವಿಧಾನಗಳು ನೆರವೇರಿಸಲಾಯಿತು.

ಶರನ್ನವರಾತ್ರಿ ಸೇವಾ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ, ಸಮಿತಿಯ ಆರ್.ಕುಮಾರಸ್ವಾಮಿ, ಟಿ.ಎಂ.ನಾಗರಾಜ್, ಎನ್.ಎಸ್.ಮಂಜುನಾಥ್, ಗಿರೀಶ್ ಶೇಠ್, ಕೃಷ್ಣಮೂರ್ತಿ, ನರೇಶ್ ಲಾಡ್, ಜಿವೇಂದ್ರಕುಮಾರ್, ಸಂತೋಷ್, ಸುನಿಲ್ ಕುಮಾರ್, ಟಿ.ಆರ್.ಜಯರಾಂ, ಕೆ.ಎಸ್.ಸಂತೋಷ್ ಕುಮಾರ್, ಎಂ.ಕಾರ್ತಿಕ್, ನಾಗಾರ್ಜುನ ಇದ್ದರು.

ADVERTISEMENT

9 ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಹಂಸವಾಹಿನಿ ಅಲಂಕಾರ ಮಾಡಲಾಗಿತ್ತು. ಸೆ. 27ರಂದು ವೃಷಭವಾಹಿನಿ, 28ರಂದು ಮಯೂರವಾಹಿನಿ, 29ರಂದು ಗರುಡವಾಹಿನಿ, 30ರಂದಯ ರಾಜರಾಜೇಶ್ವರಿ, ಅಕ್ಟೋಬರ್ 1ರಂದು ಧನಲಕ್ಷ್ಮಿ, 2ರಂದು ವೀನಾ ಶಾರದೆ, 3ರಂದು ಅನ್ನಪೂರ್ಣೇಶ್ವರಿ ಅಲಂಕಾರ ಹಾಗೂ ಸಾಮೂಹಿಕ ದುರ್ಗಾಹೋಮ ಆಯೋಜಿಸಲಾಗಿದೆ.

4ರಂದು ಚಾಮುಂಡೇಶ್ವರಿ, 5ರಂದು ಗಜವಾಹಿನಿ ಅಲಂಕಾರ ಮಾಡಲಾಗುತ್ತದೆ. ಸಂಜೆ ಅಂಬು ಹೊಡೆಯುವ, ಬನ್ನಿ ಮುರಿಯುವ ಕಾರ್ಯಕ್ರಮ, ನಂತರ ತೆಪ್ಪೋತ್ಸವದೊಂದಿಗೆ ಭದ್ರಾಹಿನ್ನೀರಿನಲ್ಲಿ ದೇವಿಯ ವಿಸರ್ಜನೆ ನಡೆಯಲಿದೆ. ಪ್ರತಿ ನಿತ್ಯ ಸಂಜೆ ವಿವಿಧ ಸಂಘ ಸಂಸ್ಥೆಗಳಿಂದ ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.