ADVERTISEMENT

ಎನ್.ಆರ್.ಪುರ: ದಾಖಲಾತಿ ಹೆಚ್ಚಳಕ್ಕೆ ಮಕ್ಕಳ ಹೆಸರಿನಲ್ಲಿ ₹1 ಸಾವಿರ ಠೇವಣಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:10 IST
Last Updated 10 ಮೇ 2025, 14:10 IST
<div class="paragraphs"><p>ಹಣ </p></div>

ಹಣ

   

ಗುಳ್ಳದಮನೆ(ಎನ್.ಆರ್.ಪುರ): ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಪ್ರಯೋಗ ಮಾಡಿದ್ದು, ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ₹1 ಸಾವಿರ ಠೇವಣಿ ಇಡುವ ಯೋಜನೆ ರೂಪಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಾಕುಮಾರಿ ತಿಳಿಸಿದ್ದಾರೆ.

ಠೇವಣಿ ಹಣವನ್ನು ದಾನಿಗಳಾದ ಕಡೂರಿನ ಎಂಪ್ಲೇ ಹೇರ್ ಅಂಡ್ ಬ್ಯೂಟಿ ಸ್ಟುಡಿಯೊ ಮಾಲಕಿ ಮೇಘನಾ ನೀಡುತ್ತಿದ್ದಾರೆ. ಗ್ರಾಮಸ್ಥರು, ಮಕ್ಕಳ ಪೋಷಕರು ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಮಕ್ಕಳ ಹೆಸರಿನಲ್ಲಿ ಠೇವಣಿ ಇಡುತ್ತಿರುವ ದಾನಿಗಳಾದ ಮೇಘನಾ ಅವರನ್ನು ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.