ADVERTISEMENT

ಕಳಸ: ಅರಣ್ಯ ತಪಾಸಣೆ ಠಾಣೆಯ ಮೇಲೆ ಪೆಟ್ರೋಲ್ ಬಾಂಬ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 10:13 IST
Last Updated 17 ಫೆಬ್ರುವರಿ 2019, 10:13 IST
ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು.
ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು.   

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಯ ಸಂಸೆ ಸಮೀಪದ ಬಸರೀಕಲ್ಲು ಅರಣ್ಯ ತಪಾಸಣೆಠಾಣೆಗೆ ನಸುಕಿನ 3 ಗಂಟೆ ಹೊತ್ತಿನಲ್ಲಿ, ನಾಲ್ಕು ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ನಾಲ್ಕರಲ್ಲಿ ಒಂದು ಬೆಂಕಿ ಹೊತ್ತಿಕೊಂಡು ರಟ್ಟಿನ ಪೆಟ್ಟಿಗೆಯಲ್ಲಿದ್ದ ಚೀಟಿಗಳು ಸುಟ್ಟಿವೆ.

ಬಾಟಲಿ ಬಿದ್ದ ಶಬ್ದ ಕೇಳಿ ಸಿಬ್ಬಂದಿ ಠಾಣೆಯಿಂದ ಹೊರಕ್ಕೆ ಓಡಿದ್ದಾರೆ. ಠಾಣೆಯ ಹಿಂಬದಿಯಿಂದ ಎಸೆದಿದ್ದಾರೆ.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಡಿವೈಎಸ್‌ಪಿ ರಮೇಶ ಜಹಗೀರ್‌ದಾರ್ ಮತ್ತುಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT