ADVERTISEMENT

ಮೂಡಿಗೆರೆ: ಮೇ 9ರಿಂದ ಫಲ್ಗುಣಿ ಸುಗ್ಗಿಹಬ್ಬ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:01 IST
Last Updated 7 ಮೇ 2024, 13:01 IST
ಪದ್ಮಾವತಿ ದೇವಿ
ಪದ್ಮಾವತಿ ದೇವಿ   

ಮೂಡಿಗೆರೆ: ತಾಲ್ಲೂಕಿನ ಕೋಳೂರು ಸಾವಿರದ ಫಲ್ಗುಣಿ ಪದ್ಮಾವತಿ ದೇವಿಯ ಸುಗ್ಗಿ ಹಬ್ಬವು ಮೇ 9ರಿಂದ ಪ್ರಾರಂಭವಾಗಿ ಮೇ 25 ರಂದು ಮುಕ್ತಾಯಗೊಳ್ಳಲಿದೆ.

ತಾಲ್ಲೂಕಿನ ಪ್ರಮುಖ ಸುಗ್ಗಿ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಕೋಳೂರು ಸಾವಿರದ ಸುಗ್ಗಿಹಬ್ಬದಲ್ಲಿ 9ರಂದು ಮಂದಿಗೆ ಸಾಸುವೆ, 10 ರಂದು ಹೊನ್ನಾರ, 11ರಂದು ಒಳ್ಳೆ ಮಾತಿನವರ ಚೌತ, 12ರಂದು ಇರುಳು ಮಡೆ, 13ರಂದು ಹಗಲು ಮಡೆ, 14ರಂದು ಬಾಸಮ್ಮನವರ ಸುಗ್ಗಿ ನಡೆಯಲಿದೆ. 21ರಂದು ಕೆಂಡೋತ್ಸವ, 24ರಂದು ಕಿತ್ಲೇರಮ್ಮನವರ ಮಡೆ, 25ರಂದು ಮುಗಿಹಬ್ಬ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT