ADVERTISEMENT

‘ದಾನಿಗಳಿಂದ ಉತ್ತಮ ಸಮಾಜ ನಿರ್ಮಾಣ’

ಸೇಂಟ್‌ ಜಾರ್ಜ್ ಜಾಕೋ ಬೈಟ್ ಚರ್ಚ್‌ನಲ್ಲಿ ದಾನಿ ಗದ್ದೆಮನೆ ವಿಶ್ವನಾಥ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:43 IST
Last Updated 26 ಜುಲೈ 2025, 6:43 IST
ನರಸಿಂಹರಾಜಪುರದ ವಿವಿಧ ಚರ್ಚ್‌ಗಳಿಗೆ ಧನ ಸಹಾಯ ಮಾಡಿದ ಉದ್ಯಮಿ ವಿಶ್ವನಾಥ್ ಗೆದ್ದೆಮನೆ ಮತ್ತು ಜಿನಿ ವಿಶ್ವನಾಥ್ ದಂಪತಿಯನ್ನು ಕ್ರೈಸ್ತರ ಪರವಾಗಿ ಗೌರವಿಸಲಾಯಿತು
ನರಸಿಂಹರಾಜಪುರದ ವಿವಿಧ ಚರ್ಚ್‌ಗಳಿಗೆ ಧನ ಸಹಾಯ ಮಾಡಿದ ಉದ್ಯಮಿ ವಿಶ್ವನಾಥ್ ಗೆದ್ದೆಮನೆ ಮತ್ತು ಜಿನಿ ವಿಶ್ವನಾಥ್ ದಂಪತಿಯನ್ನು ಕ್ರೈಸ್ತರ ಪರವಾಗಿ ಗೌರವಿಸಲಾಯಿತು   

ನರಸಿಂಹರಾಜಪುರ: ದಾನಿಗಳಿಂದಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿ ಮಂದಿರ ರಸ್ತೆಯ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ನ ಫಾ.ಎ.ಜೆ.ಜಾರ್ಜ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ನಲ್ಲಿ ದಾನಿಗಳಾದ ಉದ್ಯಮಿ ಗದ್ದೇಮನೆ ವಿಶ್ವನಾಥ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ನಾನು ದೀಪ್ತಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದಾಗ ಉದ್ಯಮಿ ವಿಶ್ವನಾಥ ವಿದ್ಯಾರ್ಥಿಯಾಗಿದ್ದರು. ಈಗ ಉದ್ಯಮಿಯಾಗಿ ಬೆಳವಣಿಗೆ ಹೊಂದಿರುವುದಕ್ಕೆ ಹೆಮ್ಮೆಯಾಗಿದೆ. ಗಳಿಸಿದ ಆದಾಯದಲ್ಲಿ ಸ್ವಲ್ಫ ಭಾಗವನ್ನು ಹುಟ್ಟೂರಿನ ಸರ್ಕಾರಿ ಶಾಲೆಗಳು, ದೇವಸ್ಥಾನ, ಚರ್ಚ್‌ಗಳಿಗೆ ನೀಡುತ್ತಿರುವುದು ಮಾದರಿಯಾಗಿದೆ’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟನಿ ಮಾತನಾಡಿ, 12 ವರ್ಷಗಳಿಂದ ಉದ್ಯಮಿ ಗದ್ದೇಮನೆ ವಿಶ್ವನಾಥ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ 110 ಶಾಲೆಗಳ 7,500 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದಾರೆ. ಹುಟ್ಟೂರನ್ನು ಮರೆಯದೆ ಸಮುದಾಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾದರಿಯಾಗಿದ್ದಾರೆ ಎಂದರು.

ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ಗೆ ಆರ್ಥಿಕ ಸಹಾಯ ನೀಡಿದ ವಿಶ್ವನಾಥ್ ದಂಪತಿಯನ್ನು ಸನ್ಮಾನಿಸಲಾಯಿತು.

ರಾಜ್ಯ ಕ್ರಿಶ್ಚಿಯನ್ ಕೌನ್ಸಿಲ್ ಮಾಜಿ ಸದಸ್ಯ ಎಂ.ಪಿ.ಸನ್ನಿ, ಸೆಂಟ್ ಜಾರ್ಜ್‌ ಜಾಕೋಬೈಟ್ ಚರ್ಚ್‌ನ ಕಾರ್ಯದರ್ಶಿ ಫೌಲೋಸ್, ಸಹ ಕಾರ್ಯದರ್ಶಿ ಎಲ್ದೋ, ಖಜಾಂಚಿಗಳಾದ ಟಿ.ವಿ.ವಿಜಯನ್, ಜೇಮ್ಸ್, ವಿಶ್ವನಾಥ ಅವರ ಪತ್ನಿ ಜಿನಿ ವಿಶ್ವನಾಥ್, ಎಂ.ಪಿ.ಮನು ಭಾಗವಹಿಸಿದ್ದರು.

ವಿಶ್ವನಾಥ್ ದಂಪತಿ ಎಲ್.ಎಫ್.ಚರ್ಚ್, ಬಸ್ತಿಮಠದ ಸೆಂಟ್ ಮೇರಿಸ್ ಚರ್ಚ್‌ಗೆ ಭೇಟಿ ನೀಡಿ ಚರ್ಚ್‌ನ ಧರ್ಮಗುರು ಹಾಗೂ ಆಡಳಿತ ಮಂಡಳಿಗೆ ಆರ್ಥಿಕ ಸಹಾಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.