ಮೂಡಿಗೆರೆ: ಪ.ಪಂ. ವ್ಯಾಪ್ತಿಯ ಕಾಲೇಜು ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದ್ದು, ಎಲ್ಲೆಂದರಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.
ಸರ್ಕಾರಿ ಕಾಲೇಜು ಮುಂಭಾಗದಿಂದ ಪೊಲೀಸ್ ವಸತಿ ಗೃಹಗಳವರೆಗೂ ಚರಂಡಿ ನಿರ್ಮಿಸಲಾಗಿದ್ದು, ಹಳೆ ಪೈಪ್‌ಲೈನ್ ಸಂಪರ್ಕ ಕಡಿತವಾಗಿದ್ದರಿಂದ ನೀರು ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ರಸ್ತೆ ಮೇಲೆಲ್ಲಾ ಕೆಸರು ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೆ ಬರದಂತಾಗಿದೆ. ಸಂತ ಮಾರೈಸ್ ಕಾಲೇಜು ಮುಂಭಾಗದಲ್ಲಿ ಖಾಸಗಿ ಕಾರೊಂದು ಪೈಪ್‌ಲೈನ್ ಚರಂಡಿಗೆ ಸಿಲುಕಿ ಹಾನಿಯಾಗಿದ್ದು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರನ್ನು ಹೊರ ತೆಗೆಯಲು ಹರಸಾಹಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.