ADVERTISEMENT

ಗಡಿ ಗ್ರಾಮಗಳ ಅಭಿವೃದ್ದಿಗೂ ಆದ್ಯತೆ: ಆನಂದ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:12 IST
Last Updated 28 ಏಪ್ರಿಲ್ 2025, 14:12 IST
ತಾಲ್ಲೂಕಿನ ಅಂತರಘಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು
ತಾಲ್ಲೂಕಿನ ಅಂತರಘಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು   

ಕಡೂರು: ‘ಗಡಿ ಗ್ರಾಮಗಳನ್ನು ನಿರ್ಲಕ್ಷ್ಯಿಸದೆ  ಅಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಸೋಮವಾರ ತಾಲ್ಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಅಡಚಣೆಯಾಗಿದೆ ಎಂಬ ಆರೋಪಕ್ಕೆ ಅರ್ಥವೇ ಇಲ್ಲ. ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದೆ. ತಾಲ್ಲೂಕಿನಲ್ಲೂ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ’ ಎಂದರು.

ADVERTISEMENT

ಗಡಿಯಿಂದ ಮಂಜುನಾಥಪುರ ತಾಂಡ್ಯಾದವರೆಗೆ ₹1.5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ’ ಎಂದರು.

ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿ, ‘ಶಾಸಕರು ಗಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದರ ಜತೆಗೆ ಸಂಸದರ ಅನುದಾನವೂ ಗಡಿ ಗ್ರಾಮಗಳಿಗೆ ಲಭಿಸಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ’ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಅಂತರಘಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಆಂಜನಪ್ಪ, ಅರುಣ್ ಕುಮಾರ್, ಪಾರ್ವತಮ್ಮ, ಮುಖಂಡರಾದ ಹೂಲಿಹಳ್ಳಿ ರಮೇಶ್, ಹನುಮಂತಪ್ಪ, ಚಂದ್ರಪ್ಪ ಇದ್ದರು.

ಚಾಲನೆ ನೀಡಿದ ಕಾಮಗಾರಿಗಳ ವಿವರ

ಹಡಗಲು ಗ್ರಾಮದ ಸಾರ್ವಜನಿಕ ಸಮುದಾಯ ಭವನ ₹ 15 ಲಕ್ಷ

ಹೂಲಿಹಳ್ಳಿ ಗ್ರಾಮದ ಸಾರ್ವಜನಿಕ ಸಮುದಾಯ ಭವನ ₹ 10 ಲಕ್ಷ

ಮಾಳೇಗುತ್ತಿ ಗ್ರಾಮದ ಸಾರ್ವಜನಿಕ ಸಮುದಾಯ ಭವನ ₹ 10 ಲಕ್ಷ

ಅಂತರಘಟ್ಟೆ ಗ್ರಾಮದ ಶ್ರೀದುರ್ಗಾಂಬ ಸಾರ್ವಜನಿಕ ಸಮುದಾಯ ಭವನ ₹ 20 ಲಕ್ಷ

ಅಂತರಘಟ್ಟೆ ಕಾಲೋನಿ ಹಟ್ಟಿ ಮಾರಿಯಮ್ಮ ದೇವಸ್ಥಾನದ ಅಭಿವೃದ್ದಿ ₹ 5 ಲಕ್ಷ

ಹೂಲಿಹಳ್ಳಿ ಜೆಜೆಎಂ ಕಾಮಗಾರಿ ₹ 50 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.