ADVERTISEMENT

ಅ.10 ರಿಂದ ಬಿಸಿಯೂಟ ತಯಾರಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 14:26 IST
Last Updated 6 ಅಕ್ಟೋಬರ್ 2023, 14:26 IST
ಲತಾ
ಲತಾ   

ಅಜ್ಜಂಪುರ: ‘ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ. 10ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು‘ ಎಂದು ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ಸದಸ್ಯೆ ಲತಾ ಹೇಳಿದರು.

ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಸಿಯುಟ ತಯಾರಿಕರಿಗೆ ₹6 ಸಾವಿರ ಮಾಸಿಕ ವೇತನ ನೀಡುವುದಾಗಿ ಗ್ಯಾರಂಟಿ ನೀಡಿತ್ತು. ಅದನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು.  ಎಡಿಎಂಸಿ ಅಧ್ಯಕ್ಷ, ಮುಖ್ಯ ಶಿಕ್ಷಕರ ಬ್ಯಾಂಕ್ ಜಂಟಿ ಖಾತೆ ಆದೇಶ ರದ್ದುಗೊಳಿಸಿ, ಮೊದಲಿನಂತೆ ಮುಖ್ಯ ಶಿಕ್ಷಕ ಮತ್ತು ಅಡುಗೆ ಸಹಾಯಕಿಯರ ಜಂಟಿ ಖಾತೆ ಮುಂದುವರಿಸಬೇಕು. ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ ಎರಡು ಲಕ್ಷ ಇಡು ಗಂಟು ನೀಡಬೇಕು. ಅಡುಗೆ ಮಾಡುವಾಗ ಅನಾಹುತ ಸಂಭವಿಸಿ ಮೃತಪಟ್ಟ ಅಡುಗೆ ಸಹಾಯಕಿಯರಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರತ್ನಾ, ವೇದಾವತಿ ಮಂಜುಳಾ, ಲಲಿತಾ, ಸುನಂದಾ, ಸುಧಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.