ADVERTISEMENT

ಚಿಕ್ಕಮಗಳೂರು ನಗರದಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 13:31 IST
Last Updated 2 ಏಪ್ರಿಲ್ 2019, 13:31 IST
   

ಚಿಕ್ಕಮಗಳೂರು: ನಗರ ಮತ್ತು ಸುಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆಯಾಯಿತು.

ರೇವತಿ ಮಳೆ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಸಂಜೆ 5.40ರ ಹೊತ್ತಿಗೆ ಮಳೆ ಶುರುವಾಯಿತು. ಸುಮಾರು 45 ನಿಮಿಷ ಸಾಧಾರಣ ಮಳೆಯಾಯಿತು. ಗುಡುಗು ಮಿಂಚಿನ ಆರ್ಭಟ ಇತ್ತು.

ಕೈಮರ, ಅಲ್ಲಂಪುರ, ಕವಿಕಲ್ಗಂಡಿ, ಗಿರಿಶ್ರೇಣಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ರಣಬಿಸಿಲಿನ ತಾಪಕ್ಕೆ ಕಾದಿದ್ದ ಇಳೆಗೆ ಮಳೆ ತಂಪೆರೆದಿದೆ.

ADVERTISEMENT

ಕಾಫಿನಾಡಿನ ವಿವಿಧೆಡೆ ಎರಡ್ಮೂರು ದಿನಗಳಿದ ಕೊಂಚ ಮಳೆಯಾಗಿದೆ. ಮೊದಲ ಮಳೆಯು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.