ADVERTISEMENT

ಆಲ್ದೂರು: ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:18 IST
Last Updated 15 ಜೂನ್ 2025, 14:18 IST
ಭಾನುವಾರ ಸುರಿದ ಮಳೆಯಿಂದ ಆಲ್ದೂರು ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ 27ರಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿತ್ತು
ಭಾನುವಾರ ಸುರಿದ ಮಳೆಯಿಂದ ಆಲ್ದೂರು ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ 27ರಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿತ್ತು   

ಆಲ್ದೂರು: ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ನಿರಂತರವಾಗಿ ಮಳೆ ಸುರಿಯಿತು. ಸಂಜೆ ವೇಳೆ ಕೊಂಚ ಬಿಡುವು ಪಡೆದುಕೊಂಡಿತು.

ಯಲಗುಡಿಗೆ, ಹೊಸಳ್ಳಿ, ತುಡುಕೂರು, ಬನ್ನೂರು, ಚಿಕ್ಕಮಾಗರವಳ್ಳಿ, ದೊಡ್ಡ ಮಾಗರವಳ್ಳಿ ಹಳಿಯೂರು, ತೋರಣ ಮಾವು, ಗುಲ್ಲನ್ ಪೇಟೆ, ಸತ್ತಿಹಳ್ಳಿ, ಹಾಂದಿ, ಹಂಗರವಳ್ಳಿ, ಬೈಗೂರು, ಆವತಿ, ಕೆರೆಮಕ್ಕಿ, ಮಾಗೋಡು, ಅರೇನೂರು, ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಬಿರುಸಿನ ವರ್ಷಧಾರೆಯಿಂದ ರೈತರು ಸಂತಸಗೊಂಡಿದ್ದು, ಭತ್ತದ ನಾಟಿ ಚಟುವಟಿಕೆ ಗರಿಗೆದರಿವೆ. ಮಳೆ ಕೊಂಚ ಬಿಡುವು ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಕೆರೆಮಕ್ಕಿ ಕಾಫಿ ಬೆಳೆಗಾರ ಮಹೇಶ್ ತಿಳಿಸಿದರು‌.

ADVERTISEMENT
ಬಿಡುವಿಲ್ಲದೆ ಸುರಿದ ಭಾನುವಾರದ ಮಳೆಯಿಂದ ಬೀದಿ ನಾಯಿ ಹಾಗೂ ಪಶುಗಳು ಸಂತೆಕಟ್ಟೆಯಲ್ಲಿ ಆಶ್ರಯ ಪಡೆದಿರುವುದು
ಬಿಡುವಿಲ್ಲದೆ ಸುರಿದ ಭಾನುವಾರದ ಮಳೆಯಿಂದ ಬೀದಿ ನಾಯಿ ಹಾಗೂ ಪಶುಗಳು ಸಂತೆಕಟ್ಟೆಯಲ್ಲಿ ಆಶ್ರಯ ಪಡೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.