ADVERTISEMENT

‘ದೇಹ ದುಡಿಮೆಗೆ, ಮನಸ್ಸು ಭಗವಂತನಿಗೆ ಅರ್ಪಿಸಿ’

ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ‘ಪ್ರಕೃತಿ ಸಮತೋಲನ ಪಾದಯಾತ್ರೆ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 5:23 IST
Last Updated 12 ಸೆಪ್ಟೆಂಬರ್ 2022, 5:23 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ‘ಕೈಗೊಂಡ ಪ್ರಕೃತಿ ಸಮತೋಲನ’ ಪಾದಯಾತ್ರೆಯ ಸಮಾರೂಪ ಕಾರ್ಯಕ್ರಮ ರಂಭಾಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ‘ಕೈಗೊಂಡ ಪ್ರಕೃತಿ ಸಮತೋಲನ’ ಪಾದಯಾತ್ರೆಯ ಸಮಾರೂಪ ಕಾರ್ಯಕ್ರಮ ರಂಭಾಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು   

ಬಾಳೆಹೊನ್ನೂರು: ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿಕೊಂಡಾಗ ಬದುಕು ಸಾರ್ಥಕ ಎಂದು ರಂಭಾಪುರಿ ಪೀಠದ ರೇಣುಕ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ನೆಗಳೂರು ಸ್ವಾಮೀಜಿ ನೇತೃತ್ವದಲ್ಲಿ ಕೈಗೊಂಡ ‘ಪ್ರಕೃತಿ ಸಮತೋಲನ ಪಾದಯಾತ್ರಾ’ಯ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಿದ್ಯೆ ವಿನಯಕ್ಕೆ ಕಾರಣವಾಗಬೇಕಲ್ಲದೇ ದುರಹಂಕಾರಕ್ಕಲ್ಲ. ಭೂಮಿ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿ ಅಕಾಲಿಕ ಸಂದರ್ಭದಲ್ಲಿ ಮಳೆ ಬಂದು ಜೀವ ಸಂಕುಲಕ್ಕೆ ಅಪಾರ ಸಮಸ್ಯೆ ಉಂಟಾಗುತ್ತಿದೆ. ಪ್ರಕೃತಿ ಕೊಟ್ಟ ಅಮೂಲ್ಯ ಕೊಡುಗೆಯನ್ನು ಜೀವ ಸಂಕುಲ ನಿರ್ಲಕ್ಷ್ಯ ಮಾಡಬಾರದು ಎಂದರು.

ADVERTISEMENT

ಪಾದಯಾತ್ರೆಯ ರೂವಾರಿ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಜೀವ ಜಗತ್ತು ಸಮೃದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶ್ರೀನಿವಾಸ ಸರಡಗಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಆಲಮೇಲ, ತಡವಲಗ, ಮಮದಾಪುರ, ಯಂಕಂಚಿ, ಗುಂಡಕನಾಳ, ಹನುಮಾಪುರ, ಅಗರಖೇಡ, ಕುಮಸಿ, ರಾಣೆಬೆನ್ನೂರು, ಕೊಡಿಯಾಲ ಹೊಸಪೇಟೆ ಸ್ವಾಮೀಜಿ ಇದ್ದರು.ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ರುದ್ರಯ್ಯ ಆಸಂದಿ, ಹುಲ್ಲಳ್ಳಿ ಸುರೇಶ, ಚಂದ್ರಕಲಾ ಅನುಘಟ್ಟ, ವಿಕ್ರಮ್. ಶಿವಪ್ರಸಾದ. ವೀರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.