ADVERTISEMENT

ಚುನಾವಣೆ ಎದುರಿಸಲು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸಜ್ಜು: ಎಸ್.ಎಲ್. ಧರ್ಮೇಗೌಡ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:18 IST
Last Updated 1 ನವೆಂಬರ್ 2020, 4:18 IST
ಧರ್ಮೇಗೌಡ
ಧರ್ಮೇಗೌಡ   

ಕೊಪ್ಪ: ‘ಕೊಪ್ಪ ಟಿ.ಎ.ಪಿ.ಸಿ.ಎಂ.ಎಸ್. ಚುನಾವಣೆ ಎದುರಿಸಲು ಪಕ್ಷಾತೀತವಾಗಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸಜ್ಜಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗು ತ್ತಿದೆ’ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಭಾಗದಲ್ಲಿ ಸಹಕಾರಿ ಕ್ಷೇತ್ರ ಸದೃಢವಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಕ್ಷಾತೀತವಾಗಿ ಕೆಲಸ ನಿರ್ವಹಿಸಿದ್ದೇನೆ. ಆದ್ದರಿಂದಲೇ ಸೆಕ್ಷನ್ 11ರ ಸ್ಥಾನದಲ್ಲಿದ್ದ ಬ್ಯಾಂಕ್ ಇಂದು ರಾಜ್ಯದಲ್ಲೇ ನಂಬರ್ 1 ಎಂದು ಗುರುತಿಸಿಕೊಂಡಿದೆ’ ಎಂದರು.

‘ಸಹಕಾರಿ ಕ್ಷೇತ್ರ ರೈತರ ಪರವಾಗಿ ಕೆಲಸ ಮಾಡಬೇಕು. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ, ಸಾಲ ವಿತರಣೆ ಮತ್ತು ವಸೂಲಾತಿಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಸರ್ಕಾರದ ಷೇರನ್ನು ವಾಪಸ್ ನೀಡಲಾ ಗಿತ್ತು. ಈ ಬಾರಿ ಚುನಾವಣೆಯಲ್ಲಿ ಅನೇಕ ಸ್ಥಾನಗಳನ್ನು ನಿಯಮಬಾಹಿರವಾಗಿ ಅನರ್ಹಗೊಳಿಸಲಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವ ಭರವಸೆ ಇದೆ’ ಎಂದರು.

ADVERTISEMENT

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಎಲ್ಲಾ ಸಹಕಾರಿ ಧುರೀಣರ ಸಹಕಾರ ಪಡೆದು ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಕಾಯಾ, ವಾಚಾ, ಮನಸಾ ಸಹಕರಿಸುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವ ಅಗತ್ಯವಿದೆ. ಎಲ್ಲಾ ಸಾಧಕ ಬಾಧಕಗಳನ್ನು ನೋಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ’ ಎಂದು ತಿಳಿಸಿದರು.

ಚುನಾವಣಾ ತಯಾರಿಕೆಗಾಗಿ ಅಭ್ಯರ್ಥಿಗಳಿಗೆ ಕಿಟ್ ವಿತರಿಸಲಾಯಿತು. ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು.

ಸಹಕಾರಿ ಪ್ರತಿಷ್ಠಾನದ ತಾಲ್ಲೂಕು ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಪ್ರಧಾನ ಸಲಹೆಗಾರ ನಟರಾಜ್ ಬಾಳೆಮನೆ, ಎ.ಎಸ್.ನಾಗೇಶ್, ಎಚ್.ಎಂ.ಸತೀಶ್, ಎಚ್.ಕೆ.ಸುರೇಶ್ ಹೊಸೂರು, ಎಚ್.ಎಸ್.ಇನೇಶ್, ಎಚ್.ಶಶಿಕುಮಾರ್, ಅನ್ನಪೂರ್ಣ ನರೇಶ್, ಅಭ್ಯರ್ಥಿಗಳಾದ ಬೆಂಡೆಹಕ್ಲು ನಾರಾಯಣ, ನುಗ್ಗಿ ಮಂಜು ನಾಥ್, ಸುಬ್ರಹ್ಮಣ್ಯ ಭಟ್, ದಯಾನಂದ, ಪ್ರದೀಪ್ ಶೆಟ್ಟಿ, ನಾಗರತ್ನಮ್ಮ, ರೂಪಾ ಕೃಷ್ಣಮೂರ್ತಿ, ರಾಜಾಶಂಕರ್, ಕೆ.ಸಿ.ಸುಬ್ರಹ್ಮಣ್ಯ, ಪ್ರಕಾಶ್, ಪುಟ್ಟಸ್ವಾಮಿ, ಚಿಂತನ್ ಬೆಳಗೊಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.