
ಕೊಪ್ಪ: ‘ನಿವೇಶನಗಳ ಬೇಡಿಕೆ ಹೆಚ್ಚಿದೆ. ಅರ್ಹತೆ ಆಧರಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ 140 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
‘ನಿವೇಶನ ಒದಗಿಸುವ ನಿಟ್ಟಿನಲ್ಲಿ ಎದುರಾಗಿರುವ ಅರಣ್ಯ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಆಗಿರುವ ಅಧಿಸೂಚನೆ ತೆರವುಗೊಳಿಸಲು ತಿದ್ದುಪಡಿ ಮಾಡಲಾಗುತ್ತಿದೆ. ಸರ್ಕಾರ ಈ ಹಿಂದೆ ಅಕ್ರಮ ಸಕ್ರಮ ಸಮಿತಿ ತಡೆಹಿಡಿದಿತ್ತು. ನಾನು ಬೆಳಗಾಂ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರಿಂದ ಸಮಿತಿಗೆ ಮತ್ತೆ ಅವಕಾಶ ಸಿಕ್ಕಿತು. ಎಲ್ಲಿಯೂ ಭ್ರಷ್ಟಾಚಾರ, ಅಕ್ರಮ ನಡೆಯದಂತೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಂಡಿದ್ದೇವೆ’ ಎಂದರು.
‘ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಈ ಅವಧಿಯಲ್ಲಿ ಹಕ್ಕುಪತ್ರ ವಿತರಿಸಬೇಕೆಂಬ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದೇವೆ. ಹಕ್ಕುಪತ್ರ ಕೊಡಿಸುವಲ್ಲಿ ಸಾಮಾಜಿಕ ಕಾರ್ಯಕರ್ತ ಯೂಸುಫ್ ಪಟೇಲ್ ಅವರು ಅಧಿಕಾರಿಗಳ ಹಿಂದೆ ಬಿದ್ದು ಶ್ರಮಿಸಿದ್ದಾರೆ’ ಎಂದು ತಿಳಿಸಿದರು.
ತಹಶೀಲ್ದಾರ್ ಲಿಖಿತಾ ಮೋಹನ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್, ಹರಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಕೆ.ಎನ್., ಉಪಾಧ್ಯಕ್ಷೆ ಜಯಂತಿ ಬಾಯಿ, ಸದಸ್ಯರಾದ ಇಂದಿರಾ ಕೆ.ಎಸ್., ಲಿಸ್ಸಿ ಜೋಯ್, ಫೈರೋಜ್, ರಿತೇಶ್, ಆನಂದ್, ಶಕುಂತಲಾ, ಯು.ಸಿ.ಚೇತನ್, ಶ್ರೀನಿವಾಸ್, ಪದ್ಮಾ, ಶ್ರುತಿ ಎಚ್.ಎಂ., ರೇವತಿ ಸುರೇಶ್, ವಸತಿ ಯೋಜನೆ ನೋಡಲ್ ಅಧಿಕಾರಿ ಓಂಕಾರಮೂರ್ತಿ, ಪಿಡಿಓ ಕರಿಯಪ್ಪ,
ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಅಶೋಕ್, ವಲಯ ಅರಣ್ಯಾಧಿಕಾರಿ ಪ್ರವೀಣ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ನುಗ್ಗಿ ಮಂಜುನಾಥ್, ಅನ್ನಪೂರ್ಣ ನರೇಶ್, ಕೆಡಿಪಿ ಸದಸ್ಯರಾದ ಚಿಂತನ್, ರಾಜಶಂಕರ್, ಅಶೋಕ್ ನಾರ್ವೆ, ಸಾದಿಕ್ ನಾರ್ವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಮತ್ತಿತರು ಇದ್ದರು.
ಒಂದು ಪಕ್ಷ ಜಾತಿಗೆ ಸೀಮಿತವಾದ ಶಾಸಕ ನಾನಲ್ಲ. ವಿರೋಧಿಗಳ ಆಧಾರ ರಹಿತ ಆರೋಪಕ್ಕೆ ಉತ್ತರಿಸಲ್ಲ. ಹರಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ₹7.44 ಕೋಟಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ
-ಟಿ.ಡಿ.ರಾಜೇಗೌಡ ಶಾಸಕ
‘ಭೂಗಳ್ಳರ ಮಟ್ಟ ಹಾಕುವ ಕೆಲಸ'
'ಕ್ಷೇತ್ರದಲ್ಲಿ ಈ ಹಿಂದೆ ಭೂ ಮಂಜೂರಾತಿಗೆ ಸಲ್ಲಿಸಿದ್ದ ದಾಖಲೆ ಕದ್ದ ಪ್ರಕರಣ ಅಕ್ರಮ ಹಾಗೂ ಭ್ರಷ್ಟಾಚಾರ ಪ್ರಕರಣ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜನಪರ ಕೆಲಸ ಮಾಡುತ್ತಿದ್ದಾರೆ. ಇದೀಗ ದಾಖಲೆಗಳು ಡಿಜಿಟಲೀಕರಣವಾಗಿದ್ದು ಭೂಗಳ್ಳರನ್ನು ಮಟ್ಟ ಹಾಕಲಾಗುತ್ತಿದೆ' ಎಂದು ಶಾಸಕ ರಾಜೇಗೌಡ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹರಂದೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಿ.ಅಶೋಕ್ ‘ಅರಣ್ಯ ಇಲಾಖೆ ಕಾನೂನು ಪ್ರಕಾರ ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಕೊಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ನಿವೇಶನ ಮಂಜೂರು ಮಾಡುವಲ್ಲಿ ಹಾಗೂ ಹಕ್ಕುಪತ್ರ ವಿತರಿಸುವ ಹಿಂದೆ ಮಾಜಿ ಶಾಸಕ ಜೀವರಾಜ್ ಶಾಸಕ ರಾಜೇಗೌಡ ಸಾಮಾಜಿಕ ಕಾರ್ಯಕರ್ತ ಯೂಸುಫ್ ಪಟೇಲ್ ಅವರ ಶ್ರಮವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.