ADVERTISEMENT

ರಸ್ತೆ ವಿಭಜಕಕ್ಕೆ ಜೀಪ್ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಶಬರಿಮಲೆ ಭಕ್ತರು

ರಿಫ್ಲೆಕ್ಟರ್ ಇಲ್ಲದ ಪರಿಣಾಮ ಅಪಘಾತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:51 IST
Last Updated 11 ಜನವರಿ 2026, 5:51 IST
ಕೊಪ್ಪದ ಬಾಳಗಡಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತ ಜೀಪ್
ಕೊಪ್ಪದ ಬಾಳಗಡಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತ ಜೀಪ್   

ಕೊಪ್ಪ: ಪಟ್ಟಣ ಸಮೀಪದ ಬಾಳಗಡಿಯಲ್ಲಿ ಮಲ್ಪೆ– ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65ರಲ್ಲಿ ಪ್ರತಿಫಲಕ(ರಿಫ್ಲೆಕ್ಟರ್‌) ಇಲ್ಲದ ರಸ್ತೆ ವಿಭಜಕಕ್ಕೆ ಶನಿವಾರ ನಸುಕಿನಲ್ಲಿ ಮಹಿಂದ್ರಾ ಜೀಪ್ ಡಿಕ್ಕಿ ಹೊಡೆಡಿದ್ದು, ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಭಕ್ತರು ಗಾಯಗೊಂಡ ಘಟನೆ ನಡೆದಿದೆ.

ಜೀಪ್‌ನಲ್ಲಿ ಇದ್ದವರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಿಂದ ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರಸ್ತೆ ವಿಭಜಕ ಇರುವುದು ಚಾಲಕನ ಅರಿವಿಗೆ ಬಾರದೇ ಅಪಘಾತ ಸಂಭವಿಸಿದೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕು ಕಚೇರಿ ಸಮೀಪದಿಂದ ಪಟ್ಟಣದ ಕಡೆಗೆ ಬರುವ ರಸ್ತೆಯಲ್ಲಿ ಆರಂಭಗೊಳ್ಳುವ ವಿಭಜಕವು ಬಾಳಗಡಿ ಸರ್ಕಾರಿ ಶಾಲೆ ಇರುವಲ್ಲಿ ಅರಳಿಕಟ್ಟೆ ನಾಗಸನ್ನಿದಿ ಬಳಿ ತಿರುವಿನಿಂದ ಕೂಡಿದೆ. ರಸ್ತೆ ಮಾರ್ಗ ಬದಲಾವಣೆಗೆ ಅವಕಾಶ ಕಲ್ಪಿಸಿ ವಿಭಜಕ ಪುನಃ ಆರಂಭಗೊಳ್ಳುತ್ತದೆ. ಇಲ್ಲಿ ವಿಭಜಕ ಇರುವುದು ರಾತ್ರಿ ಸಮಯದಲ್ಲಿ ಚಾಲಕರಿಗೆ ಕಾಣುವುದಿಲ್ಲ. ರಿಫ್ಲೆಕ್ಟರ್ ಇಲ್ಲದೇ ಅವೈಜ್ಞಾನಿಕ ರಸ್ತೆ ವಿಭಜಕದಿಂದ ಅಪಘಾತ ಸಂಭವಿಸುತ್ತಿದ್ದು, ಇಲಾಖೆ ಎಚ್ಚೆತ್ತುಕೊಂಡು ಇನ್ನಾದರೂ ರಿಫ್ಲೆಕ್ಟರ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.