ADVERTISEMENT

ಗ್ರಾಮಸ್ಥರಿಂದ ರಸ್ತೆ ದುರಸ್ತಿ

ಹೊಸೂರು ಗ್ರಾಮ ಸಂಪರ್ಕದ ಹಾದಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:08 IST
Last Updated 30 ಸೆಪ್ಟೆಂಬರ್ 2022, 3:08 IST
ಶ್ರಮದಾನದ ಮೂಲಕ ದುರಸ್ತಿ ಮಾಡುತ್ತಿರುವುದು
ಶ್ರಮದಾನದ ಮೂಲಕ ದುರಸ್ತಿ ಮಾಡುತ್ತಿರುವುದು   

ಕಳಸ: ಹೊಸೂರು ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯನ್ನು ಗ್ರಾಮಸ್ಥರೇ ದುರಸ್ತಿ ಮಾಡಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆಯು ಭೂಕುಸಿತದಿಂದ ಹದಗೆಡುತ್ತಿದೆ.

‘ಪ್ರತಿವರ್ಷವೂ ಮಳೆಗಾಲ ಕಳೆದ ನಂತರ ಈ ರಸ್ತೆಯ ದುರಸ್ತಿ ಮಾಡಲೇ ಬೇಕಿದೆ. ಇಲ್ಲದಿದ್ದರೆ ತೋಟಕ್ಕೆ ಗೊಬ್ಬರ ಕೊಂಡೊಯ್ಯಲು ಅಥವಾ ತೋಟದಿಂದ ಫಸಲು ತರಲು ರಸ್ತೆಯೇ ಇಲ್ಲವಾಗುತ್ತದೆ’ ಎಂದು ಗ್ರಾಮಸ್ಥ ಅಶೋಕ್ ಹೇಳುತ್ತಾರೆ.

ಶ್ರಮದಾನದಲ್ಲಿ ಗ್ರಾಮಸ್ಥರಾದ ವಿಜೇಂದ್ರ, ಅರುಣ್, ನವೀನ್, ಪ್ರವೀಣ್, ಪ್ರಸನ್ನ, ನವೀನ್, ಉದಯ್, ದಿನಕರ್ ಮತ್ತಿತರರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.