ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯ ಆರಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜುಲೈ 23ರಂದು ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿ ತಾಲ್ಲೂಕು ಹಿರಿಯೂರಿನ ತಾರಿಕಟ್ಟೆ ನಿವಾಸಿ ಸತ್ಯಾನಂದ, ಭದ್ರಾವತಿ ತಾಲ್ಲೂಕು ಹಿರಿಯೂರು ಅಪ್ಪಾಜಿ ಬಡಾವಣೆ ನಿವಾಸಿ ಸೈಯದ್ ಲತೀಪ್ ಹಾಗೂ ಭದ್ರಾವತಿ ಜಂಕ್ಷನ್ ನಿವಾಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.
ಕಳೆದ ಜುಲೈ23ರಂದು ತೀರ್ಥಹಳ್ಳಿಯಿಂದ ಚಾಲಕ ಮನು ಮತ್ತು ಸಹಾಯಕ ದರ್ಶನ್ ನರಸಿಂಹರಾಜಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿ ಮಾರಾಟ ಮಾಡಿದ ₹2 ಲಕ್ಷ ಹಣವನ್ನು ತೆಗೆದುಕೊಂಡು ವಾಪಸ್ ಹೋಗುತ್ತಿದ್ದಾಗ ಪಿಕಪ್ ವಾಹನಕ್ಕೆ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ಆರಂಬಳ್ಳಿ ಬಸ್ ನಿಲ್ದಾಣ ಬಳಿ ಅಡ್ಡಗಟ್ಟಿ 3 ಮೊಬೈಲ್, ಬೆಳ್ಳಿಯ ಆಭರಣ, ₹ 2 ಲಕ್ಷ ಹಣವನ್ನು ದೋಚಿ ಹೋಗಿದ್ದರು. ಈ ಬಗ್ಗೆ ಅಭಿಷೇಕ್ ಎಂಬುವರು ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಬೆಳ್ಳಿ ಬ್ರಾಸ್‌ಲೈಟ್, ಬೆಳ್ಳಿ ಸರ, 2 ಮೊಬೈಲ್, ಒಂದು ಸೌಂಡ್ ಸಿಸ್ಟಂ, ಕೃತ್ಯಕ್ಕೆ ಬಳಸಿದ ಹೊಂಡಾ ಸಿಟಿ ಕಾರು, ಲಾಂಗ್, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹2.55 ಲಕ್ಷ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಸ್.ನಿರಂಜನ್ ಗೌಡ ನೇತೃತ್ವದಲ್ಲಿ ಪಿ.ಎ.ಬಿನು, ಅಮಿತ್ ಚೌಗುಲೆ, ದೇವರಾಜ, ಮಧು, ಯುಗಾಂಧರ್, ಶಿವರುದ್ರಪ್ಪ, ಎಚ್.ಸಿ.ಕೌಶಿಕ್, ಕೆ.ಜೆ.ಶಂಕರ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.