ಶೃಂಗೇರಿ: ‘ಹಿರಿಯರು ನಮಗಾಗಿ ಸಾಕಷ್ಟು ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಸಂಸ್ಕೃತಿ ಎಂದರೆ ಸೇವಾ ಮನೋಭಾವ. ಈ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಭಾರತಿ ಹೇಳಿದರು.
ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹುಡುಗಾಟದ ಬದುಕು ವ್ಯರ್ಥ, ಹುಡುಕಾಟದ ಬದುಕು ಸಾರ್ಥಕ. ಪದವಿ ನಂತರ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ. ಧೈರ್ಯದಿಂದ ಎದುರಿಸಿ’ ಎಂದರು.
ವರ್ಗಾವಣೆ ಗೊಂಡ ಪ್ರಾಧ್ಯಾಪಕ ಯೋಗಿಶ್ ಸನ್ಮಾನ ಸ್ವೀಕರಿಸಿ,‘ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣಗೊಂಡು, ಜೀವನದಲ್ಲೂ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಸಾಂಸ್ಕೃತಿಕ ಸಂಯೋಜಕಿ ಆಶಾ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಾಧ್ಯಾಪಕರಾದ ಕಿರಣ್, ತೇಜಸ್ವಿನಿ, ಮಂಜುನಾಥ, ರಾಘವೇಂದ್ರ ಪ್ರಸಾದ್, ಮಂಜುಳಾ, ಸರಸ್ವತಿ ಹೆಗ್ಡೆ, ರಾಘವೇಂದ್ರ ರೆಡ್ಡಿ, ಪೂರ್ಣೇಶ್, ಮಮತಾ, ಚೇತನ್, ರವಿಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.