ADVERTISEMENT

ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ - ಗ್ರಾಮಸ್ಥರು 

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:00 IST
Last Updated 1 ಜುಲೈ 2022, 2:00 IST
ಶೃಂಗೇರಿ ಅರಣ್ಯ ಇಲಾಖೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಮರವನ್ನು ತೆರವು ಮಾಡಬೇಕು ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆಯವರಿಗೆ ಮನವಿ ಸಲ್ಲಿಸಿದರು.
ಶೃಂಗೇರಿ ಅರಣ್ಯ ಇಲಾಖೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಮರವನ್ನು ತೆರವು ಮಾಡಬೇಕು ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆಯವರಿಗೆ ಮನವಿ ಸಲ್ಲಿಸಿದರು.   

ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ 169 ರ ಪಟ್ಟಣದ ಹೊರವಲಯದಲ್ಲಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಮರಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ಬಿ. ಶಿವಶಂಕರ್ ಮಾತನಾಡಿ, `ಶೃಂಗೇರಿ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾಗುವುದಕ್ಕೆ ಅಡ್ಡಿಯಾಗಿರುವ ಮರಗಳನ್ನು ತೆರವು ಮಾಡಬೇಕು. ತಾಲ್ಲೂಕಿನ ಅಭಿವೃದ್ಧಿ ಕಾಮಾಗಾರಿಗೆ ಪದೇ ಪದೇ ಅಡ್ಡಿಪಡಿಸುತ್ತಿರುವ ನಕಲಿ ಪರಿಸರವಾದಿಗಳು ಹಾಗೂ ಎನ್.ಜಿ.ಒ ಸಂಸ್ಥೆಯ ಕ್ರಮ ಸರಿಯಲ್ಲ. ರಸ್ತೆ ಅಭಿವೃದ್ಧಿಯಾಗುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ 169 ಅಭಿವೃದ್ಧಿಯಾಗುತ್ತಿದ್ದು, ಪಟ್ಟಣಕ್ಕೆ ಸಮೀಪದ 5 ಕಿಮೀ ರಸ್ತೆ ಚತುಷ್ಪಥವಾಗಲು ಅನುದಾನ ಬಿಡುಗಡೆಯಾಗಿದ್ದು, ಮರವನ್ನು ತೆರವು ಮಾಡಿ ರಸ್ತೆ ಅಭಿವೃದ್ಧಿಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕು' ಎಂದರು.

ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆಯವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ವಲಯಾರಣ್ಯಧಿಕಾರಿ ಅನಿಲ್ ಡಿಸೋಜಾ, ಸ್ಥಳೀಯ ಮುಖಂಡರಾದ ಕೆ.ಎಂ.ಶ್ರೀನಿವಾಸ್, ನವೀನ್, ಕೆ.ಆರ್.ವೆಂಕಟೇಶ್, ಪುಟ್ಟಪ್ಪಹೆಗ್ಡೆ, ರಾಜ್‍ಕುಮಾರ್ ಹೆಗ್ಡೆ, ಕೆ.ಎಸ್.ರಮೇಶ್, ಚೇತನ್ ಹೆಗ್ಡೆ, ಬೇಗಾನೆ ಅಶೋಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.