ADVERTISEMENT

ನಗರದಲ್ಲಿ ಮೇಕೆ ಮರಿ ನುಂಗಿದ್ದ ಹೆಬ್ಬಾವು ಸೆರೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 3:10 IST
Last Updated 29 ಏಪ್ರಿಲ್ 2022, 3:10 IST
ಚಿಕ್ಕಮಗಳೂರಿನಲ್ಲಿ ಗುರುವಾರ ಸ್ನೇಕ್‌ ನರೇಶ್‌ ಅವರು ಸೆರೆಹಿಡಿದ ಹೆಬ್ಬಾವು.
ಚಿಕ್ಕಮಗಳೂರಿನಲ್ಲಿ ಗುರುವಾರ ಸ್ನೇಕ್‌ ನರೇಶ್‌ ಅವರು ಸೆರೆಹಿಡಿದ ಹೆಬ್ಬಾವು.   

ಚಿಕ್ಕಮಗಳೂರು: ಗೃಹ ಮಂಡಳಿ ಬಡಾವಣೆಯ ಕಾಫಿ ಮಂಡಳಿ ಕಚೇರಿ ಬಳಿಯ ಕೊಟ್ಟಿಗೆಯೊಂದಕ್ಕೆ ಗುರುವಾರ ಬೆಳಿಗ್ಗೆ ಹೆಬ್ಬಾವು ನುಗ್ಗಿ ಮೇಕೆ ಮರಿಯನ್ನು ನುಂಗಿದೆ.

ವೆಂಕಟಪ್ಪ ಎಂಬವರ ಮೇಕೆ ಶೆಡ್‌ಗೆ ಬೆಳಿಗ್ಗೆ 8.30ರ ಹೊತ್ತಿನಲ್ಲಿ ಹಾವು ನುಗ್ಗಿದೆ. ಹಾವು ಒಳಕ್ಕೆ ಹೋಗಿದ್ದನ್ನು ವೆಂಕಟಪ್ಪ ನೋಡಿದ್ದಾರೆ.
ತಕ್ಷಣವೇ ಸ್ಥಳೀಯರು ಉರಗ ಪ್ರೇಮಿ ಸ್ನೇಕ್‌ ನರೇಶ್‌ ವಿಷಯ ಮುಟಿಸಿದ್ದಾರೆ. ಹಾವನ್ನು ನೋಡಲು ಶೆಡ್‌ ಬಳಿ ಸುತ್ತಮುತ್ತಲಿನ ಭಾಗದ ಜನರು ಸೇರಿದ್ದರು.

‘ಮೇಕೆಮರಿಯನ್ನು ಹೆಬ್ಬಾವು ನುಂಗಿದ್ದನ್ನು ನೋಡಿದ್ದಾಗಿ ಮಾಲೀಕ ತಿಳಿಸಿದರು. ಹಾವು ಸುಮಾರು 12 ಅಡಿ ಉದ್ದ ಇತ್ತು. ಮೇಕೆ ನುಂಗಿದ್ದರಿಂದ ವಿಪರೀತ ಭಾರ ಇತ್ತು’ ಎಂದು ಸ್ನೇಕ ನರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆಬ್ಬಾವನ್ನು ಹಿಡಿದು ಚೀಲಕ್ಕೆ ತುಂಬಿಕೊಂಡೆವು. ಅರಣ್ಯಕ್ಕೆ ಒಯ್ದು ಬಿಟ್ಟೆವು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.