ADVERTISEMENT

ಶೃಂಗೇರಿ ಶ್ರೀಗಳ 75ನೇ ವರ್ಧಂತಿ ಮಹೋತ್ಸವ

ವಜ್ರೋತ್ಸವ ಭಾರತಿ ಸಂಭ್ರಮ; ವಿವಿಧ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:46 IST
Last Updated 3 ಏಪ್ರಿಲ್ 2025, 16:46 IST
ಶೃಂಗೇರಿ ಶಾರದಾ ಪೀಠದ 36ನೇ ಗುರುಗಳಾದ ಭಾರತಿ ತೀರ್ಥ ಶ್ರೀಗಳ 75ನೇ ವರ್ಧಂತಿ ಮಹೋತ್ಸವ ಅಂಗವಾಗಿ ವಜ್ರೋತ್ಸವ ಭಾರತಿ ಕಾರ್ಯಕ್ರಮದಲ್ಲಿ ಉಭಯ ಗುರುಗಳಾದ ಭಾರತಿ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತಿ ಸ್ವಾಮೀಜಿ  ಅಹ್ನಿಕ ದರ್ಶನ ನೀಡಿದರು
ಶೃಂಗೇರಿ ಶಾರದಾ ಪೀಠದ 36ನೇ ಗುರುಗಳಾದ ಭಾರತಿ ತೀರ್ಥ ಶ್ರೀಗಳ 75ನೇ ವರ್ಧಂತಿ ಮಹೋತ್ಸವ ಅಂಗವಾಗಿ ವಜ್ರೋತ್ಸವ ಭಾರತಿ ಕಾರ್ಯಕ್ರಮದಲ್ಲಿ ಉಭಯ ಗುರುಗಳಾದ ಭಾರತಿ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತಿ ಸ್ವಾಮೀಜಿ  ಅಹ್ನಿಕ ದರ್ಶನ ನೀಡಿದರು   

ಶೃಂಗೇರಿ (ಚಿಕ್ಕಮಗಳೂರು): ಇಲ್ಲಿನ ಶಾರದಾ ಪೀಠದ ಭಾರತಿ ತೀರ್ಥ ಶ್ರೀಗಳ 75ನೇ ವರ್ಧಂತಿ ಮಹೋತ್ಸವ ಅಂಗವಾಗಿ ‘ವಜ್ರೋತ್ಸವ ಭಾರತಿ’ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ನಡೆಯಿತು.

ರಾಜ್ಯ, ಹೊರರಾಜ್ಯಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ನರಸಿಂಹ ವನದ ಗುರು ನಿವಾಸದಲ್ಲಿ ಗುರುಗಳ ದರ್ಶನ ಪಡೆದು, ಶ್ರದ್ಧಾ ಭಕ್ತಿಯಿಂದ ವಸ್ತ್ರಕಾಣಿಕೆ, ಭಿಕ್ಷಾವಂದನೆ, ಫಲಪುಷ್ಪ ಸಮರ್ಪಿಸಿದರು.

‘ವಜ್ರೋತ್ಸವ ಭಾರತಿ’ ಕಾರ್ಯಕ್ರಮದ ಅಂಗವಾಗಿ ಲಕ್ಷಮೋದಕ ಗಣಪತಿ ಹೋಮ, ಅತಿರುದ್ರ ಮಹಾಯಾಗ, 75 ಲಕ್ಷ ಪಂಚಾಕ್ಷರಿ ಮಂತ್ರ ಜಪ, ಅಂಬಿಕಾ ಆರಾಧನೆ, ಅಷ್ಟೋತ್ತರ ಶತ ಲಲಿತೋಪಾಖ್ಯಾನ ಪಾರಾಯಣ, ವೇದ ಹವನ, ಅಕ್ಷರ ಲಕ್ಷ ಗಾಯತ್ರಿ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ADVERTISEMENT
ವಜ್ರೋತ್ಸವ ಭಾರತೀ ಕಾರ್ಯಕ್ರಮದ ಪ್ರಯುಕ್ತ ನವಗ್ರಹ ಹೋಮ ನಡೆಯಿತು
ಶೃಂಗೇರಿ ಶಾರದಾ ಪೀಠದ  ಭಾರತಿ ತೀರ್ಥ ಶ್ರೀಗಳು ಈಶ್ವರಗಿರಿಯ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು
ಭಾರತೀತೀರ್ಥ ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.