ADVERTISEMENT

ಶೃಂಗೇರಿ, ಕೊಪ್ಪ ಪಟ್ಟಣ ರಸ್ತೆ ಶೀಘ್ರ ವಿಸ್ತರಣೆ: ಟಿ.ಡಿ.ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:47 IST
Last Updated 27 ಜನವರಿ 2026, 7:47 IST
<div class="paragraphs"><p>ಟಿ.ಡಿ.ರಾಜೇಗೌಡ</p></div>

ಟಿ.ಡಿ.ರಾಜೇಗೌಡ

   

ಬಾಳೆಹೊನ್ನೂರು: ಈಗಾಗಲೇ ಬಾಳೆಹೊನ್ನೂರು, ಕಡಬಗೆರೆ, ಮಾಗುಂಡಿಯಲ್ಲಿ ಕಿರಿದಾದ ರಸ್ತೆಯನ್ನು ವಿಸ್ತರಣೆ ಮಾಡಿದ್ದು ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಜಯಪುರ, ಹರಿಹರಪುರದಲ್ಲಿ ರಸ್ತೆ ವಿಸ್ತರಣೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಶೃಂಗೇರಿ ಹಾಗೂ ಕೊಪ್ಪ ಪಟ್ಟಣದ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ ಸೋತರೂ ಪರವಾಗಿಲ್ಲ. ರಸ್ತೆ ಅಭಿವೃದ್ಧಿ ಕಾರ್ಯ ಕೈ ಬಿಡುವುದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಟ್ಟಣಗಳಲ್ಲಿ ರಸ್ತೆ ಕಿರಿದಾದ ಕಾರಣ ವಾಹನ ನಿಲುಗಡೆಗೆ ತೊಂದರೆ ಉಂಟಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ವಿಸ್ತರಣೆ ಅನಿವಾರ್ಯ. ಈಗಾಗಲೇ ರಸ್ತೆ ವಿಸ್ತರಣೆಯಾದ ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದ್ದು, ಭೂಮಿಯ ಮೌಲ್ಯ ಕೂಡ ದುಪ್ಪಟ್ಟಾಗಿದೆ ಎಂದರು.

ADVERTISEMENT

ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ದಿಗೆ 10 ಕೋಟಿ ಮಂಜೂರಾಗಿದ್ದು ಹಣ ಇನ್ನೂ ಬಿಡುಗಡೆಯಾಗಿಲ್ಲ. ಜನವರಿ ಕೊನೆಯ ಒಳಗೆ ಮುಖ್ಯ ರಸ್ತೆಯ ಗುಂಡಿ ಮುಚ್ಚಲಾಗುವುದು. ಗ್ರಾಮೀಣ ರಸ್ತೆ ಅಭಿವೃದ್ಧಿ, ನಿರ್ವಹಣೆಗೆ ಹಣದ ಕೊರತೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗ್ರಾಮೀಣ ಅಭೀವೃದ್ದಿ ಸಚಿವರ ಗಮನ ಸೆಳೆದು ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಭದ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯಿಂದ ಮನೆ ಕಳೆದುಕೊಳ್ಳುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಜಲಜೀವನ್ ಮಿಷನ್ ಯೋಜನೆ ಅಡಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಶೇ 90ರಷ್ಟು ಬಿಲ್ ಪಾವತಿಸಲಾಗಿದೆ. ಕೆಲವು ಹಳ್ಳಿಗಳಲ್ಲಿ ಮಾತ್ರ ನೀರು ಪೂರೈಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ನಿರ್ದಿಷ್ಟ ದಿನಗಳ ಒಳಗೆ ನೀರು ನೀಡಲು ಗಡುವು ನೀಡಲಾಗುವುದು ಎಂದರು.

ಸರ್ಕಾರ ಬರೆದುಕೊಡುವ ಭಾಷಣ ಓದುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಪಕ್ಷದ ಒತ್ತಡಕ್ಕೆ ಮಣಿದು ಕೆಲ ಕ್ಷಣದಲ್ಲಿ ಭಾಷಣ ಮುಗಿಸಿ ವಾಪಸ್‌ ತೆರಳಿರುವುದು ರಾಜಕೀಯ ಪ್ರೇರಿತ. ರಾಷ್ಟ್ರಗೀತೆ ನುಡಿಸುವ ಮುನ್ನ ಎದ್ದು ಹೋಗಿದ್ದು ತಪ್ಪು. ನಮ್ಮ ಕಡೆಯಿಂದಲೂ ಸಣ್ಣ ಪುಟ್ಟ ತಪ್ಪಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.